ನವದೆಹಲಿ: ಭಾರತ ಪ್ರವಾಸದಲ್ಲಿರುವ ಭೂತಾನ್ ಪ್ರಧಾನಿ ಲೊಟೈ ತ್ಸೇರಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ, ಸ್ನೇಹಪರ ವಾತಾವರಣದಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಮಾತುಕತೆಯನ್ನು ನಡೆಸಿದರು.
ಭೂತಾನಿನ 12ನೇ ಪಂಚವಾರ್ಷಿಕ ಯೋಜನೆಗಾಗಿ, ಪ್ರಧಾನಿ ಮೋದಿ ಆ ದೇಶಕ್ಕೆ ರೂ.4,500 ಕೋಟಿ ಹಣಕಾಸು ನೆರವನ್ನು ಘೋಷಣೆ ಮಾಡಿದರು.
ಪ್ರಧಾನಿಯಾದ ಬಳಿಕ ತ್ಸೇರಿಂಗ್ ನೀಡುತ್ತಿರುವ ಮೊದಲ ವಿದೇಶಿ ಭೇಟಿ ಇದಾಗಿದೆ. ಆರೋಗ್ಯ ವಲಯದತ್ತ ಹೆಚ್ಚಿನ ಕಾಳಜಿ ವಹಿಸಲು ನಿರ್ಧರಿಸಿರುವ ಅವರು, ಇದಕ್ಕಾಗಿ ಭಾರತದ ನೆರವನ್ನು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಭೂತಾನಿನ ಅಭಿವೃದ್ಧಿ ಪಥದಲ್ಲಿ ಭಾರತ ಒರ್ವ ನಂಬಿಕಸ್ಥ ಪಾಲುದಾರನಾಗಿ, ಗೆಳೆಯನಾಗಿ ಸದಾ ಇರುತ್ತದೆ ಎಂದು ಮೋದಿ ಆಶ್ವಾಸನೆಯನ್ನು ನೀಡಿದ್ದಾರೆ.
source: indiatoday.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.