ವಡೋದರ: ಸೌಹಾರ್ದಯುತದ ಸಂಕೇತವಾಗಿ ತನ್ನ ವಶದಲ್ಲಿದ್ದ 88 ಪಾಕಿಸ್ಥಾನಿ ಮೀನುಗಾರರನ್ನು ಭಾರತ ಬಿಡುಗಡೆ ಮಾಡಿದೆ, ಈ ಮೀನುಗಾರರು ಶುಕ್ರವಾರ ವಾಘಾ ಗಡಿ ಮೂಲಕ ತಮ್ಮ ಸ್ವದೇಶಕ್ಕೆ ತೆರಳಲಿದ್ದಾರೆ.
ಮುಸ್ಲಿಂರ ಪವಿತ್ರ ಮಾಸ ರಂಜಾನ್ ಆರಂಭದ ಹಿನ್ನಲೆಯಲ್ಲಿ ಜೂನ್ 16 ರಂದು ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿ ನವಾಝ್ ಶರೀಫ್ಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದರು, ಈ ವೇಳೆ ಭಾರತದ ವಶದಲ್ಲಿರುವ ಮೀನುಗಾರರನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದರು.
ಅದರಂತೆ ಗುಜರಾತಿನ ದ್ವಾರಕ ಜೈಲಿನಲ್ಲಿದ್ದ 82 ಮತ್ತು ಕಚ್ಛ್ ಜೈಲಿನಲ್ಲಿದ್ದ 6 ಮಂದಿ ಪಾಕಿಸ್ಥಾನಿ ಮೀನುಗಾರರನ್ನು ಪಾಕಿಸ್ಥಾನಕ್ಕೆ ಹಸ್ತಾಂತರ ಮಾಡಲಾಗುತ್ತಿದೆ, ಇವರಲ್ಲಿ 6 ಅಪ್ರಾಪ್ತ ವಯಸ್ಸಿನ ಬಾಲಕರೂ ಇದ್ದಾರೆ. ಇವರನ್ನು ದ್ವಾರಕದ ರಿಮಾಂಡ್ ಹೋಂನಲ್ಲಿ ಇಡಲಾಗಿತ್ತು.
ಇವರೆಲ್ಲಾ ಪಾಕ್ ಪ್ರಜೆಗಳೇ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, ಹೀಗಾಗಿ ಇವರನ್ನು ವಾಘಾ ಬಾರ್ಡರ್ ಮೂಲಕ ಪಾಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.