ನವದೆಹಲಿ: ಭಾರತದ ಮೊತ್ತ ಮೊದಲ ಎಂಜಿನ್ ರಹಿತ ಸೆಮಿ ಹೈ ಸ್ಪೀಡ್ ರೈಲು-ಟ್ರೈನ್ 18 ನಮ್ಮ ದೇಶದ ಅತೀ ವೇಗದ ರೈಲು ಎಂಬ ಹೆಗ್ಗಳಿಕೆಗೆ ಅಧಿಕೃತವಾಗಿ ಪಾತ್ರವಾಗಿದೆ. ಪ್ರಾಯೋಗಿಕ ಸಂಚಾರದಲ್ಲಿ ಇದು, ಗಂಟೆಗೆ 180 ಕಿಲೋಮೀಟರ್ ಸಂಚರಿಸಿದೆ.
ಟ್ರೈನ್ 18 ಭಾರತದ ಅಧಿಕೃತ ಅತೀವೇಗದ ರೈಲು ಎಂಬುದನ್ನು ರೈಲ್ವೇ ಸಚಿವ ಪಿಯೂಶ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ 29ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಟ್ರೈನ್ 18ಗೆ ಚಾಲನೆಯನ್ನು ನೀಡಲಿದ್ದಾರೆ. ದೆಹಲಿ ಮತ್ತು ವಾರಣಾಸಿ ನಡುವೆ ಇದು ಸಂಚರಿಸಲಿದೆ.
ಸಂಜೆ 6 ಗಂಟೆಗೆ ದೆಹಲಿಯಿಂದ ಹೊರಟು, ಮಧ್ಯಾಹ್ನ 2 ಗಂಟೆಗೆ ವಾರಣಸಿಯನ್ನು ತಲುಪಲಿದೆ. ವಾಪಾಸ್ ಮಧ್ಯಾಹ್ಮ 2.30ಕ್ಕೆ ವಾರಣಾಸಿಯಿಂದ ಹೊರಟರೆ, ದೆಹಲಿಯನ್ನು ರಾತ್ರಿ 10.30ಕ್ಕೆ ತಲುಪಲಿದೆ.
ಶತಾಬ್ದಿಗಿಂತ ಟ್ರೈನ್ 18ನ ದರ ಶೇ20-25ರಷ್ಟು ಹೆಚ್ಚಾಗಿರಲಿದೆ. ಊಟ ಸಹಿತ ಮತ್ತು ಊಟ ರಹಿತ ಟಿಕೆಟ್ಗಳ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ.
Need for Speed: Train 18 seen cruising at a sustained 180Km/h, officially becoming the fastest train in India pic.twitter.com/2VNF1U3qrl
— Piyush Goyal (@PiyushGoyal) December 26, 2018
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.