ನವದೆಹಲಿ: ಅತ್ಯಂತ ಖ್ಯಾತಿವೆತ್ತ ಸಮಾಜ ಸೇವಕ, ಬಾಬಾ ಅಮ್ಟೆ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮುರಳೀಧರ್ ದೇವದಾಸ್ ಅಮ್ಟೆ ಅವರ ಜನ್ಮದಿನ ಇಂದು. ಈ ಹಿನ್ನಲೆಯಲ್ಲಿ ಗೂಗಲ್ ಅವರಿಗೆ ಡೂಡಲ್ ಗೌರವವನ್ನು ಸಮರ್ಪಿಸಿದೆ.
ಅಮ್ಟೆ ಅವರ ಸೇವಾ ಜೀವನ ಮತ್ತು ಪರಂಪರೆಯ ಗೌರವಾರ್ಥವಾಗಿ ಇಂದಿನ ಡೂಡಲ್ನ್ನು ವಿನ್ಯಾಸಪಡಿಸಲಾಗಿದೆ. ಇಡೀ ಜೀವನವನ್ನು ತುಳಿತಕ್ಕೆ ಒಳಪಟ್ಟವರಿಗಾಗಿ, ಅದರಲ್ಲೂ ಮುಖ್ಯವಾಗಿ ಕುಷ್ಠರೋಗಿಗಳ ಒಳಿತಿಗಾಗಿ ಮುಡಿಪಾಗಿಟ್ಟ ಮಹಾನ್ ಸಮಾಜ ಸೇವಕ ಅವರಾಗಿದ್ದರು.
1914ರ ಡಿ.26ರಂದು ಮಹಾರಾಷ್ಟ್ರದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅವರು, ತಮ್ಮ ವಕೀಲಿ ವೃತ್ತಿ, ಐಷಾರಾಮಿ ಬದುಕನ್ನು ತೊರೆದು ಜೀವನಪರ್ಯಂತ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆಯನ್ನು ಪಡೆದುಕೊಂಡಿದ್ದರು.
ಪದ್ಮಶ್ರೀ ಪ್ರಶಸ್ತಿ, ಗಾಂಧಿ ಶಾಂತಿ ಪುರಸ್ಕಾರ, ಮಾನವ ಹಕ್ಕುಗಳಿಗಾಗಿನ ಯುಎಸ್ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.