2014ರಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯವನ್ನು ಸಾಧಿಸಿ ಕಾಂಗ್ರೆಸ್ ಪಕ್ಷವನ್ನು 44 ಸೀಟುಗಳಿಗೆ ಇಳಿಸಿದ್ದು ಅವಿಸ್ಮರಿಣೀಯ ಇತಿಹಾಸ. ಯುಪಿಎ ಸರ್ಕಾರ ಮಂಡಿಯೂರುವಂತೆ ಮಾಡಿದ್ದು ಕೇವಲ ಮತದಾರನ ಆಡಳಿತ ವಿರೋಧಿ ಭಾವನೆಯಲ್ಲ. ಭ್ರಷ್ಟಾಚಾರ, ಅಲ್ಪಸಂಖ್ಯಾತ ಓಲೈಕೆ, ಕೀಳು ರಾಜಕೀಯ, ಬಹುಸಂಖ್ಯಾತರ ತಿರಸ್ಕಾರ, ನೀತಿ ಪಾರ್ಶ್ವವಾಯುಗೊಳಗಾಗಿದ್ದ, ದೂರದೃಷ್ಟಿಯಿಲ್ಲದ ವ್ಯವಸ್ಥೆಯ ವಿರುದ್ಧದ ರಾಷ್ಟ್ರವಾದಿಯ ಕಿಚ್ಚು ಕೂಡ. ಆ ಸಂದರ್ಭದಲ್ಲಿ ಕೆಟ್ಟ ಆಡಳಿತದ ವಿರುದ್ಧ ಗಟ್ಟಿಯಾಗಿ, ಒಂದುಗೂಡಿ ನಿಂತ ಒಂದು ವರ್ಗವೆಂದರೆ ಅದು ಮಧ್ಯಮವರ್ಗ.
ಭಾರತದ ಬಹುಪಾಲು ಮಧ್ಯಮವರ್ಗ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಜೊತೆ ಕಷ್ಟ ನಷ್ಟದಲ್ಲೂ ಗಟ್ಟಿಯಾಗಿ ನಿಂತಿದೆ, ಆದರೆ ಕೆಲವರಲ್ಲಿ ಗೊಂದಲಗಳಿವೆ, ಪ್ರಶ್ನೆಗಳಿವೆ. ಅವರಲ್ಲಿ ನಿರ್ದಿಷ್ಟ ಮತ್ತು ತುರ್ತು ಬೇಡಿಕೆಗಳಿಲ್ಲದಿದ್ದರೂ ಒಂದಿಷ್ಟು ಅತೃಪ್ತಿಯಿದೆ, ಸರ್ಕಾರ ರೈತರು, ಬಡವರಿಗೆ ತಂದಿರುವ ಜನಪರ ಯೋಜನೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡುವ ಹಲವಾರು ಬ್ಯಾಂಕಿಂಗ್, ಹಣಕಾಸು ವಿಷಯಗಳು ಈ ಅತೃಪ್ತಿಗೆ ಕಾರಣವಾಗಿರಬಹುದೇನೋ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಇದಕ್ಕೆ ವಿರುದ್ಧ ಎಂಬಂತೆ ಹಿಂದೆಂದಿಗಿಂತಲೂ ಮಧ್ಯಮವರ್ಗದವರು ಇಂದು ಹೆಚ್ಚು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅಂಕಿಅಂಶಗಳು ತೋರಿಸುತ್ತಿವೆ. 2013-14ರ ವೇಳೆಗೆ ಹೋಲಿಸಿ ಬಿಡುಗಡೆ ಮಾಡಲಾದ ವರದಿಯಲ್ಲಿ, ಈಗ ಮಧ್ಯಮವರ್ಗದವರ ಬದುಕು ಎಷ್ಟು ಸುಲಲಿತವಾಗಿದೆ ಎಂಬುದು ತಿಳಿಯುತ್ತದೆ.
ಸಾಮಾನ್ಯ ತೆರಿಗೆದಾರನ ಮೇಲೆ ಜಿಎಸ್ಟಿ ಪ್ರಭಾವ
2017ರ ಜೂನ್ನಲ್ಲಿ ಜಿಎಸ್ಟಿ ಜಾರಿಗೊಂಡ ಬಳಿಕ, ಅದರ ನಿರಂತರ ಅನುಷ್ಠಾನಗಳು ಸರಾಗವಾಗಿ ನಡೆದವು ಮತ್ತು ಆರ್ಥಿಕತೆ ಅತ್ಯಂತ ವೇಗದಲ್ಲಿ ಚೇರಿಕೆಗೊಂಡಿತು. ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳು ಒಂದೇ ಛತ್ರಿಯಡಿಗೆ ಬಂದವು. ಜಿಎಸ್ಟಿ ಅನುಷ್ಠಾನದಿಂದಾಗಿ ತೆರಿಗೆಯ ಮೇಲೆ ತೆರಿಗೆಯ ಸಮಸ್ಯೆ ಕೂಡ ಬಗೆಹರಿಯಿತು. 2017-18ರ ಹಣವಾಸು ಸಾಲಿನಲ್ಲಿ ನೇರ ತೆರಿಗೆ ಪಾವತಿದಾರರ ಸಂಖ್ಯೆ ಕೂಡ 6 ಮಿಲಿಯನ್ನಿಂದ 10.6 ಮಿಲಿಯನ್ಗೆ ಏರಿಕೆಯಾಗಿ ಸಕಾರಾತ್ಮಕ ದಿಶೆ ನೀಡಿತು.
ಗ್ರಾಹಕ ಆಯವ್ಯಯ ದಾಖಲೆಯ ಪ್ರಕಾರ, ಮನೆ ಮನೆಯ ಅತ್ಯಗತ್ಯ ವಸ್ತುಗಳಾದ ಧಾನ್ಯಗಳು, ಖಾದ್ಯ ತೈಲ, ಸಕ್ಕರೆ, ಚಾಕೋಲೇಟ್, ಉಪ್ಪು, ಸಿಹಿ, ಅಲಂಕಾರಿಕ ವಸ್ತು, ವಾಶೀಂಗ್ ಪೌಡರ್ ಖರೀದಿ ಸೇರಿದಂತೆ ಸುಮಾರು ರೂ.8,400 ಮಾಸಿಕ ಖರ್ಚಿನ ಮೇಲೆ ಇಂದು ಒಂದು ಕುಟುಂಬಕ್ಕೆ ಮಾಸಿಕ ರೂ.320 ಉಳಿತಾವಾಗುತ್ತಿದೆ. ಜಿಎಸ್ಟಿ ಪೂರ್ವ ರೂ.8,400ಮಾಸಿಕ ವ್ಯಯದ ದೈನಂದಿನ ವಸ್ತುಗಳ ಮೇಲಿನ ಖರ್ಚು 830 ರೂಪಾಯಿ ಆಗಿತ್ತು, ಈಗ ಅದು 510 ರೂಪಾಯಿ ಆಗಿದೆ, ಬಹುತೇಕ 320 ರೂ ಉಳಿತಾಯವಾಗುತ್ತಿದೆ. ಅಲ್ಲದೇ, ಶೇ.99ರಷ್ಟು ವಸ್ತುಗಳು ಶೇ.18ರ ಜಿಎಸ್ಟಿ ವ್ಯಾಪ್ತಿಯೊಳಗೆ ಬರುವಂತೆ ನೋಡಿಕೊಳ್ಳಲಾಗುವುದು, ಕೇವಲ ದುಬಾರಿ ಮತ್ತು ಕೆಟ್ಟ ವಸ್ತುಗಳು ಶೇ.28ರ ತೆರಿಗೆ ವ್ಯಾಪ್ತಿಗೆ ಬರಲಿವೆ ಎಂದು ಕಳೆದ ವಾರವಷ್ಟೇ ಮೋದಿ ಘೋಷಣೆ ಮಾಡಿದ್ದಾರೆ.
ಮೋದಿ ಸರ್ಕಾರದ ಅಡಿಯಲ್ಲಿ ತೆರಿಗೆ ವಿನಾಯಿತಿ
2014-18ರ ನಡುವೆ ಮಧ್ಯಮವರ್ಗದ ತೆರಿಗೆದಾರರಿಗೆ ಹಲವಾರು ತೆರಿಗೆ ವಿನಾಯಿತಿಗಳನ್ನು ಒದಗಿಸಲಾಯಿತು. ಇದರಲ್ಲಿ ಅತೀ ಪ್ರಮುಖವಾದುದೆಂದರೆ, ವಾರ್ಷಿಕ ಆದಾಯ ತೆರಿಗೆಯ ಮೂಲ ಮಿತಿಯನ್ನು ರೂ.200,000ರಿಂದ ರೂ.250,000ಗೆ ಇಳಿಸಿದ್ದು. 2017ರಲ್ಲಿ ಅತೀ ಕಡಿಮೆ ತೆರಿಗೆ ವ್ಯಾಪ್ತಿಯ ತೆರಿಗೆ ಮಿತಿಯನ್ನು ಶೇ.10ರಿಂದ ಶೇ.5ಕ್ಕೆ ಇಳಿಸಲಾಯಿತು, ಇದರಿಂದ ತೆರಿಗೆದಾರರ ರೂ.17500 ಉಳಿತಾಯವಾಗಿದೆ. ಎರಡನೇಯದ್ದಾಗಿ, ವೇತನದಾರ ಮತ್ತು ಪಿಂಚಣಿದಾರ ವರ್ಗದ ತೆರಿಗೆ ಮುಕ್ತ ಆದಾಯ ಮಿತಿಯನ್ನು ರೂ.290,000ರಿಂದ ರೂ.40,000ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ರೂ.500,000 ಆದಾಯ ಹೊಂದಿರುವ ವ್ಯಕ್ತಿಯ ತೆರಿಗೆ ಹೊಣೆಗಾರಿಕೆ 2018-19ರ ಸಾಲಿನಲ್ಲಿ ರೂ.5,200ಕ್ಕೆ ಇಳಿಕೆಯಾಗಿದೆ, 2013-14ರ ಹಣಕಾಸು ಸಾಲಿನಲ್ಲಿ ಇದು ರೂ.18,540 ಇತ್ತು. ಇದೇ ರೀತಿ ರೂ.10,00,000 ಆದಾಯ ಗಳಿಸುವ ವ್ಯಕ್ತಿಯ ತೆರಿಗೆ ಹೊಣೆಗಾರಿಕೆ 2018-19ರ ಸಾಲಿನಲ್ಲಿ ರೂ.75,400ಕ್ಕೆ ಇಳಿದಿದೆ. 2013-14ರಲ್ಲಿ ಇದು ರೂ.1,10,210 ಆಗಿತ್ತು.
ಅಲ್ಲದೇ, ಹಿರಿಯ ನಾಗರಿಕ ತೆರಿಗೆದಾರರಿಗೆ ಹೆಚ್ಚಿನ ವಿನಾಯಿತಿಗಳನ್ನು ನೀಡಲಾಗಿದೆ. ಇವರ ಮೂಲ ಆದಾಯ ತೆರಿಗೆ ಮಿತಿಯನ್ನು ರೂ.250,000ನಿಂದ ರೂ.೩೦೦,೦೦೦ಗೆ ಏರಿಕೆ ಮಾಡಲಾಗಿದೆ. ಇವರ ಆರೋಗ್ಯ ವಿಮೆ ಅಥವಾ ವೈದ್ಯಕೀಯ ವೆಚ್ಚದಲ್ಲಿ ಕಡಿತ ಮಿತಿನ್ನು ರೂ.15 ಸಾವಿರದಿಂದ ರೂ.50 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಬ್ಯಾಂಕ್ ಬಡ್ಡಿಯ ಕಡಿತ ಮಿತಿಯನ್ನು ರೂ.10 ಸಾವಿರದಿಂದ ರೂ.50 ಸಾವಿರಕ್ಕೆ ಏರಿಸಲಾಗಿದೆ.
ಮಧ್ಯಮವರ್ಗ ಮಾತ್ರವಲ್ಲ, ಗ್ರಾಮೀಣ ವರ್ಗಕ್ಕೂ ಎರಡು ವಿಮೆ ಯೋಜನೆಗಳನ್ನು ಕೇಂದ್ರ ತಂದಿದ್ದು, ಅತ್ಯಂತ ಅಗ್ಗ ಮತ್ತು ಪ್ರಯೋಜನಕಾರಿಯಾಗಿದೆ. ಪಿಎಂಎಸ್ಬಿವೈ ವಾರ್ಷಿಕ 12 ರೂಪಾಯಿ ಪಾವತಿ ಮಾಡುವ ರೂ,200,000ನ್ನು ಒಳಗೊಂಡ ಅಪಘಾತ ವಿಮೆಯಾಗಿದೆ. ಪಿಎಂಜೆಜೆಬಿವೈ, ವಾರ್ಷಿಕ 330 ಪಾವತಿ ಮಾಡುವ 200,000 ರೂಪಾಯಿಗಳ ಜೀವ ವಿಮೆಯಾಗಿದೆ.
ಬಡ್ಡಿದರ ಮತ್ತು ಇಎಂಐಗಳ ಇಳಿಕೆ
ಮಧ್ಯಮವರ್ಗದ ಜೀವನದ ಮೇಲೆ ಪ್ರಭಾವ ಬೀರುವ ವಾಹನ ಸಾಲ, ಗೃಹಸಾಲ, ಶಿಕ್ಷಣ ಸಾಲ ಮತ್ತು ಇಎಂಐಗಳಂತಹ ಮೂಲ ಸಾಲಗಳ ಬಡ್ಡಿದರವೂ 2014ರ ಬಳಿಕ ಇಳಿಕೆಯಾಗುತ್ತಾ ಬಂದಿದೆ. 50 ಲಕ್ಷ ರೂಪಾಯಿಗಳ ಗೃಹ ಸಾಲದ ಮೇಲಿನ ಬಡ್ಡಿದರ 2014ರ ವೇಳೆಯಲ್ಲಿ ಶೇ.10.15ರಷ್ಟಿತ್ತು, 2018ರ ಮೇನಲ್ಲಿ ಅದು ಶೇ.8.65ಕ್ಕೆ ಇಳಿಕೆಯಾಗಿದೆ. ಇದು 25 ವರ್ಷದಲ್ಲಿ ಸಾಲಗಾರರ ರೂ.15,60,000ನ್ನು ಉಳಿತಾಯ ಮಾಡಲಿದೆ. ಇದೇ ರೀತಿ, 750,000 ರೂಪಾಯಿ ಶಿಕ್ಷಣ ಸಾಲದ ಬಡ್ಡಿದರ ಶೇ.3.25ರಷ್ಟು ಇಳಿಕೆಯಾಗಿದೆ, ಇದು 2014ರ ಮೇಗೆ ಹೋಲಿಸಿದರೆ 5 ವರ್ಷದಲ್ಲಿ ಸಾಲಗಾರನ 81 ಸಾವಿರದ 900 ರೂಪಾಯಿಗಳನ್ನು ಉಳಿಸಲಿದೆ. ರೂ.10 ಲಕ್ಷದವರೆಗಿನ ವೈಯಕ್ತಿಕ ಸಾಲದ ಬಡ್ಡಿದರ ಶೇ.10.65ಕ್ಕೆ ಇಳಿಕೆಯಾಗಿದೆ, 2014ರ ಮೇನಲ್ಲಿ ಇದು ಶೇ.15.50ರಷ್ಟಿತ್ತು. ಇದರಿಂದ 5 ವರ್ಷದಲ್ಲಿ ರೂ.1,68,000 ಉಳಿತಾಯವಾಗಲಿದೆ.
ನಿಯಂತ್ರಿತ ಹಣದುಬ್ಬರ
ಕಳೆದ ನಾಲ್ಕು ವರ್ಷಗಳಲ್ಲಿ ಗ್ರಾಹಕ ಹಣದುಬ್ಬರ ಸ್ಥಿರವಾಗಿದೆ ಮತ್ತು ಶೇಕಡಾ 3ರಿಂದ 5ರ ಟಾರ್ಗೆಟ್ನಲ್ಲಿದೆ. ಆಹಾರ ಮತ್ತು ಇಂಧನ ದರ ತಗ್ಗಿದ ಪರಿಣಾಮ 2018 ಅಕ್ಟೋಬರ್-2019 ಮಾರ್ಚ್ನ ನಡುವೆ ಹಣದುಬ್ಬರ ಶೇ.2.7ರಷ್ಟಿರಲಿದೆ. 2012ರಿಂದ 2018ರವರೆಗೆ ಭಾರತದ ಸಾಮಾನ್ಯ ಹಣದುಬ್ಬರ ದರ ಶೇ.6.37ರಷ್ಟಿದೆ. 2013ರ ವೇಳೆಯಲ್ಲಿ ಇದು ಸಾರ್ವಕಾಲೀಕ ದಾಖಲೆ ಎಂಬಂತೆ ಶೇ.12.12ರಷ್ಟಿತ್ತು. 2017ರಲ್ಲಿ ಶೇ.1.54ಕ್ಕೆ ಬಂದು ದಾಖಲೆ ಮಾಡಿತ್ತು. ಯುಪಿಎ-2 ಕಾಲದಲ್ಲಿ ಡಬಲ್ ಡಿಜಿಟ್ ಹಣದುಬ್ಬರ ದರ ಬಡವರನ್ನು. ಮಧ್ಯಮವರ್ಗದವರನ್ನು ಕಾಡಿತ್ತು. ಇಂಧನ, ಆಹಾರ ಪದಾರ್ಥಗಳ ದರ ಗಗನಕ್ಕೇರಿತ್ತು. ಕಳೆದ ನಾಲ್ಕು ವರ್ಷಗಳಿಂದ ಹಣದುಬ್ಬರ ಗ್ರಾಹಕರ ಪಾಲಿಗೆ ಅತ್ಯಂತ ವರದಾಯಕವಾಗಿದೆ, ಭಾರತದ ಆರ್ಥಿಕ ಪ್ರಗತಿಯ ದರವೂ ಶೇ.7.1ರಷ್ಟು ಏರಿ, ವಿಶ್ವದ ವೇಗದ ಆರ್ಥಿಕತೆ ಎನಿಸಿದೆ.
ಅಪನಗದೀಕರಣ, ಜಿಎಸ್ಟಿ ಸೇರಿದಂತೆ, ಇನ್ನೂ ಹಲವಾರು ಕ್ರಮಗಳಿಂದ ಮಧ್ಯಮವರ್ಗದವರಿಗೆ ಪ್ರಯೋಜನವಾಗಿದೆ. ಬಡವರ ಕಲ್ಯಾಣ, ಆರ್ಥಿಕತೆಯ ಆರೋಗ್ಯ ರಾಷ್ಟ್ರದ ಪ್ರಗತಿಗೆ ಮಹತ್ವದ್ದಾಗಿದೆ ಮತ್ತು ಪ್ರಾಮಾಣಿಕ ತೆರಿಗೆದಾರರಿಂದ ಮಾತ್ರ ಇದನ್ನು ಸಾಕಾರಗೊಳಿಸಲು ಸಾಧ್ಯ. ತೆರಿಗೆ ವ್ಯಾಪ್ತಿಯಂತೆ ರಾಷ್ಟ್ರದ ಪ್ರಗತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ ಮತ್ತು ದೂರದೃಷ್ಟಿ, ಕಾರ್ಯಕ್ಷಮತೆ ಹೊಂದಿದ ಸರ್ಕಾರದ ನೀತಿ ನಿಯಮಗಳಿಂದ ಪ್ರಗತಿ ಸಾಕಾರವಾಗುತ್ತದೆ.
ಮೂಲ ಲೇಖನ: ಶುಭಾಂಗಿ ಶರ್ಮಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.