×
Home About Us Advertise With s Contact Us

ಸಣ್ಣ, ಮಧ್ಯಮ ಉದ್ಯಮಗಳಿಗಾಗಿ 20 ಹೆಚ್ಚುವರಿ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲಿದೆ ಕೇಂದ್ರ

ನವದೆಹಲಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 20 ಟೆಕ್ನಾಲಾಜಿ ಸೆಂಟರ್‌ಗಳನ್ನು ನಿರ್ಮಾಣ ಮಾಡಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಈ ಟೆಕ್ನಾಲಜಿ ಸೆಂಟರ್‌ಗಳು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ಪಾದನಾ ತಂತ್ರಜ್ಞಾನ, ಕೌಶಲ್ಯಭರಿತ ಮಾನವಸಂಪನ್ಮೂಲವನ್ನು ಒದಗಿಸಲಿದೆ ಮತ್ತು ತಾಂತ್ರಿಕ ಹಾಗೂ ವ್ಯವಹಾರಿಕ ಸಲಹಾ ಬೆಂಬಲವನ್ನೂ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಈ ಸೆಂಟರ್‌ಗಳು ಸ್ಥಾಪನೆಗೊಳ್ಳಲಿದೆ, ಇದಕ್ಕಾಗಿ ಅನುಮೋದನೆಯೂ ಸಿಕ್ಕಿದೆ. ಪ್ರಸ್ತುತ ದೇಶದಲ್ಲಿ ಇಂತ 10 ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

ಅಲ್ಲದೇ, ಪ್ರಧಾನ ಮಂತ್ರಿ ರೋಜ್‌ಗಾರ್ ಸೃಜನ್ ಕಾರ್ಯಕ್ರಮ್ ಮತ್ತು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್‌ನಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಕಷ್ಟು ಸಹಾಯಕವಾಗಿದ್ದು, ಇದರಿಂದಾಗಿ ದೇಶದಲ್ಲಿ 6 ಲಕ್ಷ ಹೊಸ ಉದ್ಯಮಗಳ ಸೃಷ್ಟಿಯಾಗಿದೆ. ಈ ಉದ್ಯಮಗಳು 3 ಕೋಟಿ ಉದ್ಯೋಗವನ್ನು ಸೃಷ್ಟಿಸಲಿದೆ ಎಂದರು.

source: zeenews

 

Recent News

Back To Top
error: Content is protected !!