ಶ್ರೀಹರಿಕೋಟಾ: ಜಗತ್ತು ಬಹುನಿರೀಕ್ಷೆಯಿಂದ ಕಾಯುತ್ತಿರುವ ಭಾರತದ ಚಂದ್ರಯಾನ-2 ಯೋಜನೆ ಟ್ರ್ಯಾಕ್ನಲ್ಲಿ ಇದೆ, ಮಾತ್ರವಲ್ಲ 2019ರಲ್ಲಿ ಇಸ್ರೋ 32 ಮಿಶನ್ಗಳನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ.
‘2019ರ ವರ್ಷ ನಮಗೆ ಅತ್ಯಂತ ಬ್ಯೂಸಿಯಾಗಿರಲಿದೆ. ಚಂದ್ರಯಾನ-2 ವರ್ಷದ ಮೊದಲ ಭಾಗದಲ್ಲೇ ಕಾರ್ಯರೂಪಕ್ಕೆ ಬರಲಿದೆ, ಜನವರಿಯಿಂದ ಫೆಬ್ರವರಿ ನಡುವೆಯೇ ಇದು ಜರಗುವ ನಿರೀಕ್ಷೆ ಇದೆ. ಇದಕ್ಕಾಗಿ ಶ್ರಮಿಸುತ್ತಿದ್ದೇವೆ’ ಎಂದು ಸಿವನ್ ಹೇಳಿದ್ದಾರೆ.
ಈ ವರ್ಷ ಇಸ್ರೋ 17 ಮಿಶನ್ಗಳನ್ನು ನಡೆಸಲು ಯಶಸ್ವಿಯಾಗಿದೆ, ಮುಂದಿನ ವರ್ಷ 32 ಮಿಶನ್ ನಮ್ಮ ಟಾರ್ಗೆಟ್ ಆಗಿದೆ ಎಂದಿದ್ದಾರೆ.
ಕಳೆದ 35 ದಿನಗಳಲ್ಲಿ ಇಸ್ರೋ 3 ಮಿಶನ್ಗಳನ್ನು ನಡೆಸಿದ್ದು, ಜಿಎಸ್ಎಲ್ವಿ MK III-2, ಪಿಎಸ್ಎಲ್ವಿ-ಸಿ43 ಮತ್ತು ಜಿಎಸ್ಎಲ್ವಿ-ಎಫ್ 11ನನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ.
source: newindianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.