ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜುಗಳಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಕೈಗಾರಿಕೆ ಸಂಬಂಧಿತ ವೇತನ ಸಹಿತ ಅಪ್ರೆಂಟಿಶಿಪ್ಸ್ಗಳಿಗೆ ನೇಮಕಾತಿಗೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ.
2019-20ರ ಶೈಕ್ಷಣಿಕ ವರ್ಷದಿಂದಲೇ ಈ ’ರಾಷ್ಟ್ರೀಯ ಸಮಗ್ರ ಅಪ್ರೆಂಟಿಶಿಪ್ ಯೋಜನೆ’ ಆರಂಭವಾಗಲಿದೆ. ಮೊದಲ ವರ್ಷದಲ್ಲಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ಸರ್ಕಾರದಿಂದ ಸ್ಟೈಪೆಂಡ್ನ ಶೇ.25ರಷ್ಟು ಪಾಲು ಸಿಗಲಿದೆ. ಅಂದರೆ ಮಾಸಿಕ 1,500 ರೂಪಾಯಿ ಸಿಗಲಿದೆ. ಮುಂದಿನ ಹಂತದಿಂದ ಪದವಿ ಪೂರೈಸುವ 80 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಈ ಅವಕಾಶ ವಿಸ್ತರಣೆಯಾಗಲಿದೆ.
ಪದವಿ ಪೂರೈಸುವ ಮುನ್ನವೇ ವಿದ್ಯಾರ್ಥಿಗಳಿಗೆ ಉದ್ಯೋಗ ನಡೆಸಲು ಬೇಕಾದ ಕೌಶಲ್ಯಗಳು ಈ ಯೋಜನೆಯಿಂದ ದೊರೆಯಲಿದೆ.
ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವಾಲಯವು 2022ರ ವೇಳೆಗೆ ಸುಮಾರು 5 ಮಿಲಿಯನ್ ವಿದ್ಯಾರ್ಥಿಗಳ ಉದ್ಯೋಗ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಇಂತಹದೊಂದು ಯೋಜನೆಯನ್ನು ಆರಂಭಿಸುತ್ತಿದೆ. ಡಿ.11ರಂದು ಎಚ್ಆರ್ಡಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ಕೌಶಲ್ಯಾಭಿವೃದ್ಧಿ ಸಚಿವ ಧರ್ಮೆಂದ್ರ ಪ್ರಧಾನ್ ಅವರೊಂದಿಗೆ ಈ ಬಗ್ಗೆ ಸಭೆ ನಡೆಸಿ ಚರ್ಚಿಸಿದ್ದಾರೆ.
ಉದ್ಯೋಗಾವಕಾಶಗಳನ್ನು ವೃದ್ಧಿಸುವ ಸಲುವಾಗಿ ಪದವಿ ಕಾರ್ಯಕ್ರಮಗಳನ್ನು ಇಂಡಸ್ಟ್ರೀ ಸಂಬಂಧಿತ ಅಪ್ರೆಂಟಿಶಿಪ್ಸ್ಗಳೊಂದಿಗೆ ಲಿಂಕ್ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ.
source: hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.