ನವದೆಹಲಿ: ಹೊಸ ಯುಗದ ಬ್ಯಾಂಕಿಂಗ್ ಅಗತ್ಯತೆಗಳನ್ನು ನೀಗಿಸಲು ಮತ್ತು ವ್ಯವಹಾರಗಳನ್ನು ಪ್ರಗತಿಯತ್ತ ಕೊಂಡೊಯ್ಯುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳು ಈ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಜನರನ್ನು ನೇಮಕಗೊಳಿಸಲು ನಿರ್ಧರಿಸಿವೆ ಎನ್ನಲಾಗಿದೆ.
ಕಳೆದ ಎರಡು ವರ್ಷದಲ್ಲಿ ಈ ಬ್ಯಾಂಕುಗಳು ನೇಮಕಾತಿಗೊಳಿಸಿದ್ದು 95 ಸಾವಿರ ಜನರನ್ನು, ಈ ಬಾರಿ ಒಂದೇ ವರ್ಷದಲ್ಲಿ ಇವುಗಳು 1 ಲಕ್ಷ ಜನರನ್ನು ನೇಮಕಗೊಳಿಸಲು ಮುಂದಾಗಿದ್ದು ಉತ್ತಮ ಬೆಳವಣಿಗೆಯಾಗಿದೆ.
ಆಸ್ತಿ ನಿರ್ವಹಣೆ, ಅನಾಲಿಟಿಕ್ಸ್, ಸ್ಟ್ರ್ಯಾಟಜಿ, ಡಿಜಿಟಲ್ ಬ್ಯಾಂಕಿಂಗ್, ಕಸ್ಟಮರ್ ಸರ್ವಿಸ್ಗಳ ವಿಶೇಷ ಕಾರ್ಯಗಳಿಗಾಗಿ ಉದ್ಯೋಗಿಗಳನ್ನು ನೇಮಿಸಲು ಮುಂದಾಗಿವೆ.
source: timesnow
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.