ಇಂಟರ್ನೆಟ್ನಲ್ಲಿ 2ಜಿ, 3ಜಿ ವ್ಯವಸ್ಥೆ ಇದ್ದರೂ ಜನರು ವೆಬ್ ಪುಟಗಳನ್ನು ವೀಕ್ಷಿಸಲು ಪರದಾಡುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ವಿಶ್ವದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ಗೂಗಲ್ ತನ್ನ ಕ್ರೋಮ್ ಹಾಗೂ ಆಂಡ್ರಾಯ್ಡ್ ಬ್ರೌಸರ್ಗಳಿಗೆ ಹೊಸ ಸ್ವರೂಪ ಕಲ್ಪಿಸಿದೆ.
ಇದಕ್ಕಾಗಿ ಸೈಡ್ಲ್ಯಾಬ್ಸ್ ಎಂಬ ಹೊಸ ಕಂಪೆನಿಯನ್ನು ಗೂಗಲ್ ಸ್ಥಾಪಿಸಿದ್ದು, ಆ ಮೂಲಕ ಬ್ರೌಸರ್ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಗೂಗಲ್ ತಿಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಈ ತಂತ್ರಜ್ಞಾನ ಭಾರತ ಮತ್ತು ಬ್ರೆಜಿಲ್ ದೇಶಗಳಲ್ಲಿ ಜಾರಿಗೆ ಬರಲಿದ್ದು, ಈ ಬ್ರೌಸರ್ಗಳಿಂದ ವೆಬ್ ಸ್ಮಾರ್ಟ್ಫೋನ್ ಬಳಕೆದಾರರು ಪುಟಗಳನ್ನು ವೇಗವಾಗಿ ತೆರೆಯಲು ಅನುಕೂಲವಾಗಲಿದೆ ಎಂದು ಹೇಳಿದೆ.
ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಈ ಸಂಸ್ಥೆ ಸ್ಥಾಪಿಸಲಾಗಿದ್ದು, ಅಭಿವೃದ್ಧಿಯ ಜೊತೆಗೆ ಜನರು ಹೆಚ್ಚು ಲಾಭ ಪಡೆಯುವುದು ಇದರ ಉದ್ದೇಶವಾಗಿದೆ. ನಿಧಾನ ಗತಿಯ ಸಂಪರ್ಕ ಹೊಂದಿರುವ ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಗೂಗಲ್ ಸರ್ಚ್ ಪ್ರಾಡಕ್ಟ್ ವ್ಯವಸ್ಥಾಪಕ ಹಿರೊಟೊ ಟೊಕುಸೈ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.