ಕೊಹಿಮಾ: ನಾಗಾಲ್ಯಾಂಡ್ನ ಪ್ರಸಿದ್ಧ ಹಾರ್ನ್ಬಿಲ್ ಉತ್ಸವದ 8ನೇ ದಿನದ ಕಾರ್ಯಕ್ರಮಕ್ಕೆ ಶನಿವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಚಾಲನೆಯನ್ನು ನೀಡಿದ್ದಾರೆ. ಡಿ.10ರವರೆಗೆ ಉತ್ಸವ ಜರುಗಲಿದೆ.
ನಾಗಾ ಜನರ ಶ್ರೀಮಂತ ಸಂಸ್ಕೃತಿ, ನಾಗರಿಕತೆಯನ್ನು ಈ ಉತ್ಸವ ಪ್ರತಿಬಿಂಬಿಸುತ್ತದೆ.
ಉತ್ಸವದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ‘ಈ ಹಾರ್ನ್ಬಿಲ್ ಉತ್ಸವದಲ್ಲಿ ಭಾರತದ ಶಾಂತಿ, ಸಂತೋಷ, ಬಹುತ್ವದ ಸಹಬಾಳ್ವೆಯನ್ನು ಕಂಡೆ. ಕಳೆದ ವರ್ಷ ಈ ಅದ್ಭುತವನ್ನು ನೋದಿದ್ದ ನನಗೆ ಈ ಬಾರಿ ಕಾರ್ಯಕ್ರಮಕ್ಕೆ ಬರದೆ ಇರಲಾಗಲಿಲ್ಲ’ ಎಂದಿದ್ದಾರೆ.
ರಾಜನಾಥ್ ಅವರಿಗೆ ನಾಗಾ ಸಿಎಂ ನೆಪ್ಯೂ ರಿಯೋ ಅವರು, ನಾಗಾ ಸಂಪ್ರದಾಯಿಕ ಸ್ವಾಗತವನ್ನು ಕೋರಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.