ನವದೆಹಲಿ: ಬಡವ ಬಲ್ಲಿದ ಎಂಬ ಭೇದ ಮಾಡದೆ ಯುವ ವೈದ್ಯರುಗಳು ರೋಗಿಗಳನ್ನು ಸಹಾನುಭೂತಿ, ಕರುಣೆಯಿಂದ ಉಪಚರಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಏಮ್ಸ್ನ 46ನೇ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಮ್ಸ್ ಆಸ್ಪತ್ರೆ ಭಾರತದ ಹೆಮ್ಮೆಯಾಗಿದ್ದು, ರೋಗಿಗಳ ಉಪಚಾರ, ಅತ್ಯುತ್ತಮ ಸೇವೆ, ಸಂಶೋಧನೆ, ಉಪನ್ಯಾಸಗಳಿಗಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಎಂದಿದ್ದಾರೆ.
ಕ್ಲಾಸ್ರೂಮ್ ಆಧಾರಿತ ಶಿಕ್ಷಣದಿಂದ ತಂತ್ರಜ್ಞಾನ ಆಧಾರಿತ ಶಿಕ್ಷಣದತ್ತ ವೈದ್ಯಕೀಯ ಶಿಕ್ಷಣ ಬದಲಾಗಿದೆ ಎಂದ ಅವರು, ಏಮ್ಸ್ ಅಭಿವೃದ್ಧಿಪಡಿಸಿದ ಪಠ್ಯಗಳನ್ನು ದೇಶದ ಇತರ ವೈದ್ಯಕೀಯ ಕಾಲೇಜುಗಳೂ ಅನುಸರಿಸಲಿವೆ ಎಂದರು.
ರೋಗಿಯ ಹಣಕಾಸು ಪರಿಸ್ಥಿತಿ ಹೇಗೆಯೇ ಇರಲಿ, ಆತನನ್ನು ಸಹಾನುಭೂತಿಯಿಂದ ಉಪಚರಿಸಬೇಕಾದುದು ವೈದ್ಯರುಗಳ ಕರ್ತವ್ಯ ಎಂದು ಅವರು ಪ್ರತಿಪಾದಿಸಿದರು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.