ನವದೆಹಲಿ: ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ(ಪಿಎಂಜೆಎವೈ) ಆರಂಭಗೊಂಡು ಕೇವಲ 10 ವಾರಗಳಷ್ಟೇ ಆಗಿವೆ. ಆದರೆ ಈಗಾಗಲೇ 4.6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಯೋಜನೆಯ ಮೂಲಕ ಇವರಿಗೆ ರೂ.600 ಕೋಟಿಗಳನ್ನು ವ್ಯಯಿಸಲಾಗಿದೆ.
ಪಿಎಂಜೆಎವೈ ಸಿಇಓ ಇಂದು ಭೂಷಣ್ ಅವರು ಈ ಬಗೆಗೆ ಮಾಹಿತಿಯನ್ನು ನೀಡಿದ್ದು, 4.5 ಲಕ್ಷ ಫಲಾನುಭವಿಗಳ ಪೈಕಿ ಮೂರನೇ ಎರಡರಷ್ಟು ಮಂದಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ, ರೂ.600 ಕೋಟಿಗಳನ್ನು ವ್ಯಯಿಸಲಾಗಿದ್ದು, ಸಂಖ್ಯೆ ಇನ್ನಷ್ಟು ಏರಲಿದೆ ಎಂದಿದ್ದಾರೆ.
ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ ಜಗತ್ತಿನ ಅತೀದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಹಿರಿಮೆಯನ್ನು ಹೊಂದಿದ್ದು, ಕಳೆದ ಸೆ.23ರಂದು ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಚಾಲನೆಯನ್ನು ನೀಡಿದ್ದರು.
ಈ ಯೋಜನೆಯಡಿ ದೇಶದ 10 ಕೋಟಿ ಕುಟುಂಬಗಳಿಗೆ ವಾರ್ಷಿಕರ ರೂ.5 ಲಕ್ಷದಷ್ಟು ಆರೋಗ್ಯ ವಿಮೆ ಸಿಗಲಿದೆ.
ಈ ಯೋಜನೆಗೆ ಒಳಪಟ್ಟು 14 ಸಾವಿರ ಆಸ್ಪತ್ರೆಗಳ ಪೈಕಿ 8 ಸಾವಿರ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳು ಎಂದು ಭೂಷಣ್ ತಿಳಿಸಿದ್ದಾರೆ.
source: economictimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.