ಅಕ್ಲೆಂಡ್: 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ನ್ಯೂಜಿಲ್ಯಾಂಡ್ ತಂಡದ ಆಟಗಾರ ಡೇನಿಯಲ್ ವೆಟ್ಟೋರಿಯವರು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ವಿಶ್ವಕಪ್ ಪಂದ್ಯಾವಳಿ ಮುಗಿಸಿ ಅಕ್ಲೆಂಡ್ ಏರ್ಪೋರ್ಟ್ ಗೆ ಬಂದಿಳಿದ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ವೆಟ್ಟೋರಿ, ವಿಶ್ವಕಪ್ನ ಫೈನಲ್ ಪಂದ್ಯ ನನ್ನ ಜೀವನದ ಕೊನೆಯ ಪಂದ್ಯವಾಗಿತ್ತು ಎಂದಿದ್ದರು.
ಇದೀಗ ನ್ಯೂಜಿಲ್ಯಾಂಡ್ ಅಧಿಕೃತ ಟ್ವಿಟರ್ ಖಾತೆ ವೆಟ್ಟೋರಿ ರಾಜೀನಾಮೆಯನ್ನು ಅಧಕೃತವಾಗಿ ಘೋಷಿಸಿದೆ. ಐಸಿಸಿ ಕೂಡ ಇದನ್ನು ಅಧಿಕೃತಗೊಳಿಸಿದೆ.
18 ವರ್ಷಗಳ ಕಾಲ ಕ್ರಿಕೆಟ್ ಜೀವನ ನಡೆಸಿದ 36 ವರ್ಷದ ವೆಟ್ಟೋರಿ ಒಟ್ಟು 113 ಟೆಸ್ಟ್ ಮತ್ತು 295 ಏಕದಿನ ಪಂದ್ಯವನ್ನಾಡಿದ್ದಾರೆ.
ಈ ವರ್ಷದ ವಿಶ್ವಕಪ್ ಫೈನಲ್ ಪಂದ್ಯಕ್ಕೇರಿದ ಕಿವೀಸ್ ತಂಡವನ್ನು ಅಲ್ಲಿನ ಜನತೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಅದರೊಂದಿಗೆ ವೆಟ್ಟೋರಿ ನಿವೃತ್ತಿಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.