ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಖ್ಯಾತನಾಮರನ್ನು ಚುನಾವಣಾ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಬಾಲಿವುಡ್ನ ಪ್ರಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರನ್ನು ಪುಣೆಯಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಇತ್ತೀಚಿಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ‘ಸಂಪರ್ಕ್ ಸೇ ಸಮರ್ಥನ್’ ಭಾಗವಾಗಿ ದೀಕ್ಷಿತ್ ಅವರ ಮನೆಗೆ ತೆರಳಿ ಕೇಂದ್ರದ ಸಾಧನೆಗಳ ಪಟ್ಟಿಯಿರುವ ಕೈಪಿಡಿಯನ್ನು ಅವರಿಗೆ ನೀಡಿದ್ದರು.
ಪುಣೆ ಲೋಕಸಭಾ ಸ್ಥಾನಕ್ಕೆ ಅವರ ಹೆಸರು ಶಾರ್ಟ್ಲಿಸ್ಟ್ ಆಗಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಇನ್ನೊಂದೆಡೆ, ಇತ್ತೀಚಿಗೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಗೌತಮ್ ಗಂಭೀರ್ ಅವರನ್ನು ಕೂಡ ಲೋಕಸಭಾ ಚುನಾವಣಾ ಅಖಾಡಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಹಿಂದಿನಿಂದಲೂ ಗಂಭೀರ್ ಬಿಜೆಪಿ ಪರವಾದ ನಡವಳಿಕೆಗಳನ್ನು ತೋರಿಸುತ್ತಿದ್ದಾರೆ.
ಆದರೆ ಇವರಿಬ್ಬರು ತಮ್ಮ ರಾಜಕೀಯ ನಡೆಯನ್ನು ಇದುವರೆಗೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.