ನವದೆಹಲಿ: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಲುವಾಗಿ ಬುಧವಾರ, ಕೇಂದ್ರ ಸಚಿವ ಸಂಪುಟ ಕೃಷಿ ರಫ್ತು ನಿಯಮ (Agriculture Export Policy)ಕ್ಕೆ ಅನುಮೋದನೆಯನ್ನು ನೀಡಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರು, ಸ್ಥಿರ ವ್ಯಾಪಾರ ನಿಯಮ ಆಡಳಿತದ ಮೂಲಕ ರೈತರು ರಫ್ತು ಅವಕಾಶಗಳ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಕೃಷಿಯ ರಫ್ತು ನಿಯಮವು ಅತ್ಯಂತ ಸಾವಯವ ಮತ್ತು ಸಂಸ್ಕರಿಸಿದ ಆಹಾರಗಳ ಮೇಲಿನ ರಫ್ತು ನಿರ್ಬಂಧಗಳನ್ನು ತೊಡೆದು ಹಾಕಲಿದೆ ಎಂದರು.
ಅಷ್ಟೇ ಅಲ್ಲದೇ, ಸಂಪುಟವು ಇಂಟರ್ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ (ಎನ್ಎಂ-ಐಸಿಪಿಎಸ್) ರಾಷ್ಟ್ರೀಯ ಮಿಷನ್ ಗೆ ಅನುಮೋದನೆಯನ್ನು ನೀಡಿದೆ. ಇದರಡಿ ರೂ. 3660 ಕೋಟಿ ಮೊತ್ತದಲ್ಲಿ 15 ಟೆಕ್ನಾಲಜಿ ಇನ್ನೋವೇಶನ್ ಹಬ್ಗಳನ್ನು, 6 ಅಪ್ಲಿಕೇಶನ್ ಇನ್ನೋವೇಶನ್ ಹಬ್ಗಳನ್ನು ಮತ್ತು ನಾಲ್ಕು ಟೆಕ್ನಾಲಜಿ ಟ್ರಾನ್ಸ್ಸ್ಲೇಶನ್ ರಿಸರ್ಚ್ ಹಬ್ಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ.
ಪಂಜಾಬ್ನ ರವಿ ನದಿಗೆ ಅಡ್ಡಲಾಗಿ ಶಾಪುರ್ಕಂಡಿ ಡ್ಯಾಂನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ನದಿಯ ನೀರು ಪಾಕಿಸ್ಥಾನಕ್ಕೆ ಹರಿದು ವ್ಯರ್ಥಗೊಳ್ಳುವುದು ತಗ್ಗಲಿದೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.