ಮುಂಬಯಿ: ಇದೇ ಮೊದಲ ಬಾರಿಗೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ) ಬ್ರಿಟಿಷರ ಕಾಲದ ಚರಂಡಿಗಳನ್ನು ಸ್ವಚ್ಛಗೊಳಿಸಲು ರೋಬೋಟ್ನ್ನು ನಿಯೋಜಿಸುತ್ತಿದೆ. ನಗರದಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟುವ ಸಲುವಾಗಿ ಈ ವ್ಯವಸ್ಥೆಯನ್ನು ಅದು ಮಾಡಿಕೊಂಡಿದೆ.
ಯಂತ್ರಗಳನ್ನು ಬಳಸಿ ಈ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಅಸಫಲಗೊಂಡ ಹಿನ್ನಲೆಯಲ್ಲಿ, ಕಳೆದ ಒಂದು ದಶಕಗಳಿಂದ ಈ ಚರಂಡಿಗಳು ಗಬ್ಬು ನಾರುತ್ತಿವೆ. ಹಾನಿಕಾರಕ ರೋಗಾಣುಗಳನ್ನು ಹರಡುತ್ತಿವೆ. ಕಾರ್ಮಿಕರನ್ನು ಶುದ್ಧೀಕರಿಸಲು ಇಳಿಸುವುದು ಅಪಾಯಕಾರಿಯಾಗಿದೆ. ಹೀಗಾಗಿ ರೋಬೋಟ್ನ್ನು ಬಳಸುವ ನಿರ್ಧಾರಕ್ಕೆ ಬಿಎಂಸಿ ಬಂದಿದೆ.
ಎಲಿಫೆನ್ಸ್ಟೋನ್, ಪರೆಲ್, ಹಿಂದ್ಮಾತ, ಕರ್ರಿ ರೋಡ್, ಮುಂಬಯಿ ಸೆಂಟ್ರಲ್, ಬೈಕುಲ್ಲಗಳಾದ್ಯಂತ 1947ಕ್ಕೂ ಮೊದಲು ಬ್ರಿಟಿಷರು ನಿರ್ಮಿಸಿದ ಚರಂಡಿಗಳಿವೆ. ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಮೂಲಕ ಇವುಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತಿದೆ. ಆದರೆ ಸ್ಚಚ್ಛತೆ ಮಾಡುವ ಕಾರ್ಯ ನಡೆದಿಲ್ಲ.
ಇದೀಗ ಬಿಎಂಸಿಯು ಇಟಲಿಯಿಂದ ರೂ.6 ಕೋಟಿ ವೆಚ್ಚದಲ್ಲಿ ರೋಬೋಟ್ನ್ನು ಖರೀದಿಸಿ, ಈ ಚರಂಡಿಗಳ ಸ್ಚಚ್ಛತೆಗೆ ಮುಂದಾಗಿದೆ.
source: timesofindia