ನವದೆಹಲಿ: ಮುಂದಿನ ಎರಡು ದಶಕಗಳಲ್ಲಿ ಕ್ಷಿಪ್ರವಾಗಿ ಪ್ರಗತಿ ಕಾಣುತ್ತಿರುವ ವಿಶ್ವದ ಟಾಪ್ 10 ನಗರಗಳು ಭಾರತದಲ್ಲೇ ಇರಲಿವೆ ಎಂದು ಆಕ್ಸ್ಪರ್ಡ್ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
2035ರ ವೇಳೆಗೆ ವಿಶ್ವದ ಎಲ್ಲಾ ಟಾಪ್ 10 ಕ್ಷಿಪ್ರ ಪ್ರಗತಿಯ ನಗರಗಳು ಭಾರತದಲ್ಲೇ ಇರಲಿದ್ದು, ಗುಜರಾತಿನ ವಜ್ರ ಉದ್ಯಮ ಮತ್ತು ವ್ಯಾಪಾರಿ ಕೇಂದ್ರ ಸೂರತ್ ಅಗ್ರಸ್ಥಾನದಲ್ಲಿರಲಿದೆ ಎಂದು ಆಕ್ಸ್ಪರ್ಡ್ನ ಗ್ಲೋಬಲ್ ಸಿಟೀಸ್ ರಿಸರ್ಚ್ ಮುಖ್ಯಸ್ಥ ರಿಚರ್ಡ್ ಹಾಲ್ಟ್ ಹೇಳಿದ್ದಾರೆ.
ಸೂರತ್, ಆಗ್ರಾ, ಬೆಂಗಳೂರು, ಹೈದರಾಬಾದ್, ನಾಗ್ಪುರ್, ತ್ರಿಪುರಾ, ರಾಜ್ಕೋಟ್, ತಿರುಚಿರಪಳ್ಳಿ, ಚೆನ್ನೈ, ವಿಜಯವಾಡಗಳು 2019-35ರ ವೇಳೆಯಲ್ಲಿ ಕ್ಷಿಪ್ರ ಪ್ರಗತಿ ಕಾಣುವ ವಿಶ್ವದ ಟಾಪ್ 10 ನಗರಗಳಾಗಿವೆ ಎಂದಿದ್ದಾರೆ.
ಅಲ್ಲದೇ 2027 ರ ವೇಳೆಗೆ ಏಷ್ಯಾ ನಗರಗಳ ಜಿಡಿಪಿಯು ಉತ್ತರ ಅಮೆರಿಕಾ ಮತ್ತು ಯುರೋಪಿಯನ್ ನಗರ ಕೇಂದ್ರಗಳ ಜಂಟಿ ಜಿಡಿಪಿಯನ್ನು ಹಿಂದಿಕ್ಕಲಿದೆ. ಅಲ್ಲದೇ 2035ರ ವೇಳೆಗೆ ಚೀನಾ ನಗರಗಳಿಂದ ಶೇ.17ರಷ್ಟು ಹೆಚ್ಚು ಕೊಡುಗೆಗಳು ಬರಲಿವೆ ಎಂದಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.