ನವದೆಹಲಿ: ಸ್ಮಾರ್ಟ್ಫೋನ್, ಗ್ಯಾಜೆಟ್, ಆನ್ಲೈನ್ ಗೇಮಿಂಗ್, ಸೋಶಿಯಲ್ ಮೀಡಿಯಾ, ನಕಲಿ ಸುದ್ದಿಗಳು ಇತ್ಯಾದಿಗಳಿಗೆ ಬೇಗ ಆಕರ್ಷಿತರಾಗುತ್ತಿರುವ ಹದಿಹರೆಯದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಕೇಂದ್ರ ಗೃಹ ಸಚಿವಾಲಯವು ಸೈಬರ್ ಸೇಫ್ಟಿ ಬುಕ್ಲೆಟ್ಗಳನ್ನು ಹೊರತರುತ್ತಿದೆ.
38 ಪುಟಗಳ ಬುಕ್ಲೆಟ್ ಇದಾಗಿದ್ದು, ‘ಆ ಹ್ಯಾಂಡ್ಬುಕ್ ಫಾರ್ ಸ್ಟುಡೆಂಟ್ಸ್ ಆನ್ ಸೈಬರ್ ಸೇಫ್ಟಿ’ ಎಂಬ ಶೀರ್ಷಿಕೆ ನೀಡಲಾಗಿದೆ. ಸೈಬರ್ ಬುಲ್ಲಿಂಗ್, ಸೈಬರ್ ಗ್ರೂಮಿಂಗ್, ಇಮೇಲ್ ಫ್ರಾಡ್ಗಳ ದುಷ್ಪರಿಣಾಮಗಳ ಬಗೆಗೂ ಇದರಲ್ಲಿ ಮಾಹಿತಿಗಳನ್ನು ನೀಡಲಾಗಿದೆ.
ವಾಟ್ಸಾಪ್, ಫೇಸ್ಬುಕ್ ಇತ್ಯಾದಿಗಳ ಬಂದ ಸುದ್ದಿಗಳನ್ನು ಇನ್ನೊಂದು ಮೂಲದಿಂದ ಖಚಿತಪಡಿಸಿಕೊಂಡೇ ಹಂಚಿಕೆ ಮಾಡಬೇಕು ಎಂಬ ಸಂದೇಶವನ್ನು ಈ ಪುಸ್ತಕ ನೀಡುತ್ತದೆ. ವಾಟ್ಸಾಪ್ ಫೇಕ್ ನ್ಯೂಸ್ಗಳಿಂದ ದೇಶದಲ್ಲಿ ನಡೆದ ಗುಂಪುಹಲ್ಲೆಗಳ ಬಗ್ಗೆಯೂ ಇದರಲ್ಲಿ ತಿಳಿಸಲಾಗಿದೆ.
ಒಟ್ಟಿನಲ್ಲಿ ಇಂಟರ್ನೆಟ್ನ ವಿವಿಧ ಆಯಾಮಗಳ ದುರ್ಬಳಕೆಯಿಂದ ಆಗುವ ಅನಾಹುತಗಳನ್ನು ಎಚ್ಚರಿಸಲು ಈ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಂಚಲು ಗೃಹ ಸಚಿವಾಲಯ ನಿರ್ಧರಿಸಿದೆ.
source: www.ndtv.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.