ನವದೆಹಲಿ: ಅಸ್ಸಾಂ ದಿಬ್ರುಘರ್ ಮತ್ತು ಅರುಣಾಚಲ ಪ್ರದೇಶದ ಪಸಿಘಾಟ್ನ್ನು ಸಂಪರ್ಕಿಸುವ ದೇಶದ ಅತೀ ಉದ್ದದ ರೈಲ್ ಕಂ ರೋಡ್ ಬ್ರಿಡ್ಜ್ನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 25ರಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಬ್ರಿಡ್ಜ್ನ್ನು ಭಾರತೀಯ ರೈಲ್ವೇ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿದೆ. ನದಿಯಿಂದ 32 ಮೀಟರ್ ಎತ್ತರದಲ್ಲಿರುವ ಈ ಸೇತುವೆ 4.94 ಕಿಲೋಮೀಟರ್ ಉದ್ದವಿದೆ.
ಈ ಬ್ರಿಡ್ಜ್ ಏಷ್ಯಾದ ಎರಡನೇ ಅತೀ ಉದ್ದದ ಬ್ರಿಡ್ಜ್ ಆಗಿದ್ದು, ಟಾಪ್ನಲ್ಲಿ ಮೂರು ಲೇನ್ ರಸ್ತೆ ಮತ್ತು ಕೆಳಗೆ ಡಬಲ್ ಲೈನ್ ರೈಲ್ವೇ ಟ್ರ್ಯಾಕ್ನ್ನು ಹೊಂದಿದೆ.
1997ರಲ್ಲಿ ಅಂದಿನ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು, ಆದರೆ ಕಾಮಗಾರಿ ಆರಂಭಗೊಂಡಿದ್ದು 2002ರಲ್ಲಿ. ಈಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.
source: indianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.