ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಬುಧಾಬಿಗೆ ಭೇಟಿ ನೀಡಿದ ವೇಳೆ, ಉಭಯ ದೇಶಗಳು ಕರೆನ್ಸಿ ಸ್ವಾಪ್ ಸೇರಿದಂತೆ ಒಟ್ಟು ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ.
ಸುಷ್ಮಾ ಅವರು ಮಂಗಳವಾರ ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಝಯೇದ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದ್ದು, ಭದ್ರತೆ, ಭಯೋತ್ಪಾದನಾ ತಡೆ, ವ್ಯಾಪಾರ ಮತ್ತು ಇಂಧನಗಳ ಬಗ್ಗೆ ಚರ್ಚೆ ನಡೆಸಿದರು.
ಉಭಯ ದೇಶಗಳು 12ನೇ ಭಾರತ-ಯುಎಇ ಆರ್ಥಿಕ ಮತ್ತು ತಾಂತ್ರಿಕ ಸಹಕಾರ ಜಂಟಿ ಸಮಿತಿ ಸಭೆಯಲ್ಲಿ ಭಾಗವಹಿಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ತಿಳಿಸಿದರು.
ಉಭಯ ದೇಶಗಳ ವ್ಯಾಪಾರ, ರಫ್ತು, ಆಮದುಗಳ ಪಾವತಿಗಳು ಆಯಾ ದೇಶಗಳ ಕರೆನ್ಸಿಯಲ್ಲೇ, ಅಂದರೆ ಯುಎಸ್ ಡಾಲರ್ನಂತಹ ಮೂರನೇ ದೇಶದ ಕರೆನ್ಸಿಯನ್ನು ಬಳಸದೇ, ಆಯಾ ದೇಶಗಳ ಕರೆನ್ಸಿ ನಡೆಸಲು ಅನುವು ಮಾಡಿಕೊಡುವ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಆಫ್ರಿಕಾದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಂಬಂಧದ ಒಪ್ಪಂದಕ್ಕೂ ಉಭಯ ದೇಶಗಳು ಸಹಿ ಹಾಕಿವೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.