ನವದೆಹಲಿ: ಒರಿಸ್ಸಾದ ಕೌಶಲ್ಯಾಭಿವೃದ್ಧಿ ಯೋಜನೆಗೆ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಬರೋಬ್ಬರಿ 85 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ, ಭುವನೇಶ್ವರದಲ್ಲಿ ಅಡ್ವಾನ್ಸ್ಡ್ ಸ್ಕಿಲ್ ಟ್ರೈನಿಂಗ್ ಸೆಂಟರ್, ವರ್ಲ್ಡ್ ಸ್ಕಿಲ್ ಸೆಂಟರ್ಗಳು ಸ್ಥಾಪನೆಯಾಗಲಿದೆ.
ಈ ಯೋಜನೆಯಿಂದ ಸುಮಾರು 1.5 ಲಕ್ಷ ಮಂದಿ ಉತ್ಪಾದನೆ, ನಿರ್ಮಾಣ, ಔಪಚಾರಿಕ ಉದ್ಯೋಗಗಳ ಕೌಶಲ್ಯಗಳನ್ನು ಕಲಿಯಲಿದ್ದಾರೆ. ಸ್ಕಿಲ್ ಸೆಂಟರ್ಗಳು 13 ಸಾವಿರ ವಿದ್ಯಾರ್ಥಿಗಳಿಗೆ 8 ತರಬೇತಿ ಕೋರ್ಸುಗಳನ್ನು ನೀಡಲಿದೆ. 5 ಸಾವಿರ ಶಿಕ್ಷಕರನ್ನು ನಿಯೋಜಿಸಲಿದೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.