ಭುವನೇಶ್ವರ: ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್ ಇಂಟರ್ನ್ಯಾಷನಲ್ ಏರ್ಪೋರ್ಟ್ (ಬಿಪಿಐಎಪಿ)ನ್ನು ಬರೋಬ್ಬರಿ ರೂ.930 ಕೋಟಿ ವೆಚ್ಚದಲ್ಲಿ ವಿಸ್ತರಣೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒರಿಸ್ಸಾದ ಮುಖ್ಯ ಕಾರ್ಯದರ್ಸಿ ಎಪಿ ಪಢಿ ಅವರೊಂದಿಗೆ ಸಭೆ ನಡೆಸಿದ ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ನಯನ್ ಚೌಬೆ ಅವರು, ಈ ಘೋಷಣೆಯನ್ನು ಮಾಡಿದ್ದಾರೆ.
ಬಿಜು ಪಟ್ನಾಯಕ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಶೀಘ್ರವೇ 3ನೇ ಟರ್ಮಿನಲ್ ಸ್ಥಾಪನೆಯಾಗಲಿದೆ, ಮುಂದಿನ ವರ್ಷದ ಜುಲೈನಿಂದ ಸರ್ಕಾರ ಈ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ ಎಂದರು.
ವಿಸ್ತರಣೆಯಾದ ಬಳಿಕ ಈ ಏರ್ಪೋರ್ಟ್ನ ನಿರ್ವಹಣಾ ಸಾಮರ್ಥ್ಯ 35 ಲಕ್ಷ ಪ್ರಯಾಣಿಕರಿಂದ 80 ಲಕ್ಷ ಪ್ರಯಾಣಿಕರವರೆಗೆ ಏರಿಕೆಯಾಗಲಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.