ಬಿಹಾರದ ಸಣ್ಣ ನಗರವೊಂದರ ಯುವಕ ರಾಕೇಶ್ ಪಾಂಡೆ, ತನ್ನ ಸಂಶೋಧನೆಗಳ ಮೂಲಕ ಅತ್ಯಂತ ಅಗ್ಗ ಮತ್ತು ಪರಿಣಾಮಕಾರಿಯಾದ ಆರೋಗ್ಯ ಸೇವೆಗಳನ್ನು ಸೃಷ್ಟಿಸುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಜೀವನದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತ ರಾಕೇಶ್, ಬೀದಿ ವ್ಯಾಪಾರಿ, ವೈಟರ್ ಆಗಿಯೂ ಕೆಲಸ ಮಾಡಿದ್ದಾರೆ. ಆದರೆ ಈಗ ಅವರು ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದು, ಭಾರತದ ಯುವ ಉದ್ಯಮಿಗಳಿಗೆ ಪ್ರೇರಣಾಶೀಲರಾಗಿದ್ದಾರೆ. ‘ಬ್ರಾವೋ ಫಾರ್ಮಾ’ ಮಲ್ಟಿಮಿಲಿಯನೇರ್ ಕಂಪನಿಯ ಸಿಎಂಡಿಯಾಗಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.
ಮೋತಿಹಾರಿಯ ಸರೊಟ್ಟರ್ ಗ್ರಾಮದಲ್ಲಿ ಜನಿಸಿದ ಇವರು, ಬಾಲ್ಯದಲ್ಲಿ ತೀವ್ರ ಸ್ವರೂಪದ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ್ದಾರೆ. ಆದರೆ ಇದರಿಂದ ಅವರ ಕನಸು ಭಗ್ನವಾಗಿಲ್ಲ, ಸಾಧನೆ ಕುಂಠಿತವಾಗಿಲ್ಲ. ಆನ್ಕೋಲಾಜಿ ವಲಯದಲ್ಲಿ ತನ್ನ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳಿಂದ ಅವರು ಆರೋಗ್ಯ ಸೇವೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.
ಎಸ್ಟೋನಿಯಾದ ಸೆಂಟರ್ ಫಾರ್ ಕ್ಯಾನ್ಸರ್ ರಿಸರ್ಚ್ನೊಂದಿಗೆ ಸೇರಿ ಅವರು ’ಬ್ರಾವೋ ಫಾರ್ಮಾ’ ಕ್ಯಾನ್ಸರ್ ವಿರೋಧೀ ಔಷಧವನ್ನು ಅಭಿವೃದ್ಧಿಪಡಿಸುತ್ತಿದೆ. ಕ್ಯಾನ್ಸರ್ ಪತ್ತೆಯಾಗುವುದು ತಡವಾಗುತ್ತಿರುವುದರಿಂದ ರೋಗಿಗಳು ಸಾಯುತ್ತಿದ್ದಾರೆ ಎಂಬುದನ್ನು ಮನಗಂಡಿರುವ ಅವರು, ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚುವ ವಿಧಾನದ ಬಗ್ಗೆ ಅಧ್ಯಯನವನ್ನು ನಡೆಸುತ್ತಿದ್ದಾರೆ. ಆನ್ಕೋಲಜಿ, ಟೆಲಿಮೆಡಿಸಿನ್, ಅಗ್ಗದ ದರದ ಔಷಧಿಗಳ ಆಧುನಿಕ ಲ್ಯಾಬೋರೇಟರಿ ವಲಯದಲ್ಲಿ ಅವರು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.
ಫಾರ್ಮಸೆಟ್ಯುಕಲ್ ಇಂಡಸ್ಟ್ರೀಯ ಇಡೀ ಚಿತ್ರಣವನ್ನೇ ಬದಲಾಯಿಸುವತ್ತ ಹೆಜ್ಜೆಯಿಟ್ಟಿರುವ ರಾಕೇಶ್ ಪಾಂಡೆ, ಜಗತ್ತಿನ ಭೂಪಟದಲ್ಲಿ ಭಾರತ ರಾರಾಜಿಸಲಿ ಎಂಬ ಆಶಯ ಅವರದ್ದು.
source: http://www.organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.