ರಾಯ್ಪುರ: ಅರಣ್ಯ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಭದ್ರತಾ ಪಡೆಗಳನ್ನು ಗೊಂದಲಕ್ಕೀಡು ಮಾಡಲು ನಕ್ಸಲರು ಹೊಸ ಹೊಸ ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದಾರೆ. ಅಲ್ಲಲ್ಲಿ ಮರಗಳಿಗೆ ನಕ್ಸಲೀಯರ ರೂಪದ ಡಮ್ಮಿಗಳನ್ನು ಅವರು ಕಟ್ಟಿದ್ದು, ಇದೀಗ ಅವುಗಳನ್ನು ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರತಾ ಪಡೆಗಳ ದಾರಿ ತಪ್ಪಿಸುವ ಸಲುವಾಗಿ ಡಮ್ಮಿಗಳನ್ನು ಅಲ್ಲಲ್ಲಿ ಕಟ್ಟಿ ಹಾಕಲಾಗಿದೆ, ಒಂದು ಡಮ್ಮಿಯ ಪಕ್ಕದಲ್ಲಿ ಐಇಡಿ ಸ್ಫೋಟಕವನ್ನೂ ಪತ್ತೆ ಹಚ್ಚಲಾಗಿದೆ. ಅದು ಸ್ಫೋಟಗೊಳ್ಳುವ ಮುನ್ನವೇ ಅದನ್ನು ನಾಶಪಡಿಸಲಾಗಿದೆ.
ಸುಕ್ಮಾದ ಚಿಮಟಗುಫ ಏರಿಯಾದತ್ತ ಸಿಆರ್ಪಿಎಫ್ನ 150 ಬೆಟಾಲಿಯನ್ ತೆರಳುತ್ತಿದ್ದ ವೇಳೆ ಈ ಡಮ್ಮಿಗಳು ಮತ್ತು ಸ್ಫೋಟಕ ಪತ್ತೆಯಾಗಿದೆ.
ಮೊದಲು ಭದ್ರತಾ ಪಡೆಗಳು ಈ ಡಮ್ಮಿಗಳನ್ನು ನಕ್ಸಲರೆಂದು ಭಾವಿಸಿ ಸುತ್ತಲ ಪ್ರದೇಶವನ್ನು ಸುತ್ತವರೆದವು, ಬಳಿಕ ಹತ್ತಿರಕ್ಕೆ ಹೋದಾಗ ಅವುಗಳು
ನಕ್ಸಲ್ ರೂಪದ ಡಮ್ಮಿಗಳು ಎಂದು ತಿಳಿದು ಬಂದಿದೆ. ಡಮ್ಮಿಯೊಂದಿಗೆ ಮರದಿಂದ ಮಾಡಿದ ಬಂದೂಕನ್ನೂ ಇಡಲಾಗಿತ್ತು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.