ನವದೆಹಲಿ: ಜಿ20 ಸಮಿತ್ನಲ್ಲಿ ಭಾಗವಹಿಸುವ ಸಲುವಾಗಿ ಅರ್ಜೆಂಟೀನಾದ ಬ್ಯುನೋಸ್ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ನನ್ನು ಭೇಟಿಯಾದರು.
ಉಭಯ ರಾಷ್ಟ್ರಗಳ ನಡುವಣ ಆರ್ಥಿಕ, ಸಾಂಸ್ಕೃತಿಕ, ಇಂಧನ ಬಾಂಧವ್ಯಗಳನ್ನು ಉತ್ತೇಜಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.
ಅಲ್ಲದೇ ತಂತ್ರಜ್ಞಾನ, ನವೀಕರಿಸಬಹುದಾದ ಶಕ್ತಿ, ಆಹಾರ ಭದ್ರತೆಗಳ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಸೌದಿ ರಾಜಕುಮಾರನನ್ನು ಭೇಟಿಯಾದ ಬಳಿಕ ಟ್ವಿಟ್ ಮಾಡಿರುವ ಮೋದಿ, ‘ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ನೊಂದಿಗೆ ಅತ್ಯಂತ ಫಲದಾಯಕ ಮಾತುಕತೆ ನಡೆಯಿತು. ಭಾರತ-ಸೌದಿ ಅರೇಬಿಯಾದ ಸಂಬಂಧಗಳ ವಿವಿಧ ಆಯಾಮಗಳ ಬಗ್ಗೆ, ಆರ್ಥಿಕ, ಸಾಂಸ್ಕೃತಿಕ, ಇಂಧನ ಬಾಂಧವ್ಯವವನ್ನು ಮತ್ತಷ್ಟು ಉತ್ತೇಜಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಯಿತು’ ಎಂದಿದ್ದಾರೆ.
ಎರಡು ದಿನಗಳ ಕಾಲ ಜಿ20 ಸಮಿತ್ ಜರುಗಲಿದ್ದು, ಇದರ ಸೈಡ್ಲೈನ್ನಲ್ಲಿ ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತ್ರಿಪಕ್ಷೀಯ ಸಭೆ ಜರುಗಲಿದೆ.
source: Zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.