ಹೈದರಾಬಾದ್: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಭಾರತದ ಅರ್ಥ್ ಮ್ಯಾಪಿಂಗ್ ಸೆಟ್ಲೈಟ್ HysIS ಮತ್ತು ಎಂಟು ದೇಶಗಳ 30 ಸೆಟ್ಲೈಟ್ಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ಬೆಳಿಗ್ಗೆ 9.58ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ43 ರಾಕೆಟ್ ಮೂಲಕ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಾಯಿತು.
HysIS ನ್ನು ಇಸ್ರೋ ಅಭಿವೃದ್ಧಿಪಡಿಸಿದೆ. 380 ಕೆ.ಜಿ. ತೂಕವಿರುವ ಈ ಸೆಟ್ಲೈಟ್ನ ಗುರಿ ಭೂಮಿಯ ಮೇಲ್ಮೈನ ಕುರಿತು ಅಧ್ಯಯನ ಮಾಡುವುದಾಗಿದೆ. 5 ವಷ೯ಗಳವರೆಗೆ ಈ ಸೆಟ್ಲೈಟ್ ಕಾರ್ಯ ನಿರ್ವಹಿಸಲಿದೆ.
8 ದೇಶಗಳ 30 ವಿದೇಶಿ ಸೆಟ್ಲೈಟ್ಗಳ ಪೈಕಿ 29 ನ್ಯಾನೋ ಸೆಟ್ಲೈಟ್ ಆಗಿದ್ದು, ಒಂದು ಮೈಕ್ರೋ ಸೆಟ್ಲೈಟ್ ಆಗಿದೆ. 23 ಸೆಟ್ಲೈಟ್ ಅಮೆರಿಕಾಗೆ ಸೇರಿದ್ದಾಗಿದ್ದು, ಉಳಿದವು ಆಸ್ಟ್ರೇಲಿಯಾ, ಕೆನಡಾ, ಕೊಲಂಬಿಯಾ, ಫಿನ್ಲ್ಯಾಂಡ್, ನೆದರ್ಲ್ಯಾಂಡ್, ಸ್ಪೇನ್ , ಮಲೇಷ್ಯಾಗಳಿಗೆ ಸೇರಿದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.