ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ವಿಮಾನ ಕೈಗೆಟುಕದ ಹಾರುವ ಹಕ್ಕಿ, ಆಗಸದಲ್ಲಿ ಸುರ್ರ್ ಎಂದು ವಿಮಾನ ಹಾರಿದಾಗ ನೆಲದಲ್ಲೇ ನಿಂತು ಸಂಭ್ರಮಿಸುವ ಮಕ್ಕಳ ಕಣ್ಣಲ್ಲಿ ಅದರಲ್ಲಿ ಕೂತು ಹಾರುವ ಆಸೆ ಗರಿಗೆದರುತ್ತದೆ. ವಿಮಾನದ ಬಗೆಗಿನ ಮಕ್ಕಳ ಈ ಕುತೂಹಲವನ್ನೇ ಬಳಸಿಕೊಂಡು ಅವರನ್ನು ಶಾಲೆಯತ್ತ ಆಕರ್ಷಿತರನ್ನಾಗುವಂತೆ ಮಾಡಿದೆ ರಾಜಸ್ಥಾನದ ಸರ್ಕಾರಿ ಶಾಲೆ.
ಅಲ್ವಾರ್ ನಗರದಿಂದ 16 ಕಿಮೀ ದೂರದಲ್ಲಿರುವ ಇಂದರ್ ಘರ್ ಸರ್ಕಾರಿ ಶಾಲೆಯಲ್ಲಿ ಕಳೆದ 6 ತಿಂಗಳ ಹಿಂದೆ ಮಕ್ಕಳ ಗೈರು ಅತ್ಯಧಿಕ ಪ್ರಮಾಣದಲ್ಲಿತ್ತು, ಶಿಥಿಲಗೊಂಡ ತರಗತಿಯ ಗೋಡೆಗಳು, ಸೋರುತ್ತಿದ್ದ ಮಹಡಿ, ಮಾಸಿದ ಬಣ್ಣ ಮಕ್ಕಳನ್ನು ಶಾಲೆಯಿಂದ ದೂರ ಉಳಿಯುವಂತೆ ಮಾಡಿತ್ತು, ಆದರೀಗ ಚಿತ್ರಣ ಬದಲಾಗಿದೆ. ಶಾಲೆ ಮಕ್ಕಳು ಮಾತ್ರವಲ್ಲ ಇಡೀ ಊರಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ಇಲ್ಲಿ ರಚಿಸಲಾಗಿರುವ ವಿಮಾನ ಮಾದರಿಯ ತರಗತಿ.
ಸರ್ವ ಶಿಕ್ಷಾ ಅಭಿಯಾನದ ಭಾಗವಾಗಿ ಈ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಎಂಜಿನಿಯರ್ ರಾಜೇಶ್ ಲವಾನಿಯಾ ಅವರ ಪ್ರಸ್ಥಾಪದ ಮೇರೆಗೆ ಇಲ್ಲಿ ವಿಮಾನ ಮಾದರಿಯ ತರಗತಿಯನ್ನು ನಿರ್ಮಾಣ ಮಾಡಲಾಗಿದೆ.
ಪ್ರತಿ ತರಗತಿಯ ಮಕ್ಕಳಿಗೂ ದಿನದಲ್ಲಿ ಒಂದು ವಿಶೇಷ ತರಗತಿಯನ್ನು ಇಲ್ಲಿ ತೆಗೆದುಕೊಳ್ಳಲಾಗುತ್ತದೆ. ಇಂಟನೆ೯ಟ್ ಆಧಾರಿತ ಎಲ್ಇಡಿ ಸ್ಕ್ರೀನ್, ಯೂಟ್ಯೂಬ್ ಲೆಸನ್ ಗಳನ್ನು ಇಲ್ಲಿ ನೀಡಲಾಗುತ್ತದೆ. ಹೀಗಾಗಿ ಎಲ್ಲಾ ಮಕ್ಕಳು ಅತ್ಯಂತ ಸಂಭ್ರಮದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೊಸ ವಿದ್ಯಾರ್ಥಿಗಳು ಈ ಶಾಲೆಗೆ ಸೇರ್ಪಡೆಗೊಳ್ಳಲು ಹವಣಿಸುತ್ತಿದ್ದಾರೆ ಎಂದು ಅಲ್ಲಿನ ಶಿಕ್ಷಕರು ಹೇಳುತ್ತಾರೆ.
ಯಾವತ್ತೂ ವಿಮಾನದಲ್ಲಿ ಕೂರುತ್ತೇವೆ ಎಂದುಕೊಂಡಿರಲಿಲ್ಲ, ಆದರೀಗ ನಮ್ಮ ಕನಸು ನನಸಾಗಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.