ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನವೆಂಬರ್ 29ರಂದು ಭಾರತದ HysIS ಸೆಟ್ಲೈಟ್ ಮತ್ತು ವಿದೇಶಗಳ 30 ಸೆಟ್ಲೈಟ್ಗಳನ್ನು ನಭಕ್ಕೆ ಚಿಮ್ಮಿಸಲು ಸವ೯ ಸನ್ನದ್ಧವಾಗಿದೆ.
ತನ್ನ ಪಿಎಸ್ಎಲ್ವಿ-43 ಮೂಲಕ ಈ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಿದೆ.
HysIS ಭಾರತದ ಭೂ ಪರಿವೀಕ್ಷಣಾ ಉಪಗ್ರಹವಾಗಿದೆ. ಇದರೊಂದಿಗೆ ಅಮೆರಿಕಾದ 23 ಸೆಟ್ಲೈಟ್ ಸೇರಿದಂತೆ ವಿದೇಶಗಳ 30 ಕೋ-ಪ್ಯಾಸೆಂಜರ್ ಸೆಟ್ಲೈಟ್ಗಳನ್ನು ಉಡಾವಣೆಗೊಳಿಸಲಾಗುತ್ತಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಲಾಂಚ್ಪ್ಯಾಡ್ನಿಂದ ಪಿಎಸ್ಎಲ್ವಿಯ 45ನೇ ಹಾರಾಟ ಆರಂಭಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.