ನವದೆಹಲಿ: ತರಗತಿಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಶಾಲಾ ಮಕ್ಕಳ ಬ್ಯಾಗ್ನ ತೂಕವನ್ನು ನಿಗದಿಪಡಿಸಿದ್ದು, ಇದನ್ನು ಪಾಲನೆ ಮಾಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಿದೆ.
1 ಮತ್ತು 2 ನೇ ತರಗತಿಯ ಮಕ್ಕಳ ಬ್ಯಾಗ್ನ ತೂಕ 1.5 ಕೆ.ಜಿಗಿಂತ ಹೆಚ್ಚಿರಬಾರದು, 3ರಿಂದ 5ನೇ ತರಗತಿ ಮಕ್ಕಳ ಬ್ಯಾಗ್ನ ತೂಕ 2ರಿಂದ 3 ಕೆ.ಜಿ, 6ರಿಂರ 7ನೇ ತರಗತಿಗಳ ಬ್ಯಾಗ್ ತೂಕ 4 ಕೆ.ಜಿ, 8ರಿಂದ 10 ನೇ ತರಗತಿ ಬ್ಯಾಗ್ ತೂಕ 4.5 ಕೆ.ಜಿ ಇರಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶನ ನೀಡಿದೆ.
ಅನಗತ್ಯ, ಅವಾಸ್ತವಿಕ ವಿಷಯಗಳನ್ನು ತೆಗೆದು ಹಾಕಿ ವಿದ್ಯಾರ್ಥಿಗಳ ಹೊರೆ ತಗ್ಗಿಸುವಂತೆ ಸಚಿವಾಲಯ ತಿಳಿಸಿದೆ.
ಈ ನಿರ್ದೇಶನವನ್ನು ಪಾಲಿಸಲು ಎಲ್ಲಾ ರಾಜ್ಯಗಳು ಒಪ್ಪಿಕೊಂಡಿರುವ ಕಾರಣ ಶೀಘ್ರವೇ ದೇಶದ ಎಲ್ಲಾ ಶಾಲಾ ಮಕ್ಕಳ ಬ್ಯಾಗ್ನ ತೂಕ ಇಳಿಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.