ಮುಂಬಯಿ: 2008ರ ನವೆಂಬರ್ 26 ರಂದು ಮುಂಬಯಿ ಮೇಲೆ ಉಗ್ರರು ನಡೆಸಿದ ದಾಳಿಗೆ ಇಂದು ಹತ್ತು ವರ್ಷ ಪೂರೈಸುತ್ತಿದೆ. ಆ ಕಹಿ ಘಟನೆಯ ನೋವು ಇಂದಿಗೂ ಭಾರತೀಯರ ಮನದಲ್ಲಿ ಮಡುಗಟ್ಟಿದೆ.
ಆ ಭಯಾನಕ ಮುಂಬಯಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂಬುದು ನಿಜಕ್ಕೂ ಸಹಿಸಲಾಗದ ಸಂಗತಿಯಾಗಿದೆ.
ಇದೀಗ ಅಮೆರಿಕಾ, ಮುಂಬಯಿ ದಾಳಿಯ ಹಿಂದಿನ ಪಿತೂರಿದಾರ ವ್ಯಕ್ತಿ, ದೇಶಗಳ ವಿರುದ್ಧ ನಿಖರವಾದ ಮಾಹಿತಿ ನೀಡಿದವರಿಗೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.
ಪಾಕಿಸ್ಥಾನ ಮೂಲದ ಲಷ್ಕರ್ ಇ ತೋಯ್ಬಾದ ಉಗ್ರರು ಈ ಕೃತ್ಯ ಎಸಗಿದ್ದಾರೆ, ಉಗ್ರ ಹಫೀಜ್ ಸಯ್ಯದ್ ಇದರ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ. ಆದರೆ ಪಾಕ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ನಿಜವಾದ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.