ಲಕ್ನೋ: ವಿಶ್ವ ಹಿಂದೂ ಪರಿಷದ್ ನವೆಂಬರ್ 25ರಂದು ಅಯೋಧ್ಯೆಯಲ್ಲಿ ಧರ್ಮ ಸಂಸದ್ನ್ನು ಆಯೋಜಿಸಿದ್ದು, ಇದಕ್ಕೆ ದೇಶದಾದ್ಯಂತದಿಂದ ಸುಮಾರು ಎರಡು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.
ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸಾಧು ಸಂತರು ಈಗಾಗಲೇ ದೇಗುಲ ನಗರಿಯತ್ತ ಹೊರಟಿದ್ದಾರೆ.
ಧರ್ಮ ಸಂಸದ್ಗಾಗಿ VHP 3 ಲಕ್ಷ ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸುತ್ತಿದೆ. 1,322 ಬಸ್ಗಳಲ್ಲಿ, 1,546 ವ್ಹೀಲ್ ಚೇರ್ ಗಳಲ್ಲಿ, 14 ಸಾವಿರ ಬೈಕ್ಗಳಲ್ಲಿ ಕಾರ್ಯಕರ್ತರು ಅಯೋಧ್ಯೆಗೆ ಪ್ರಯಾಣಿಸುತ್ತಿದ್ದಾರೆ.
ಈಗಾಗಲೇ ‘ಪೆಹ್ಲೇ ಮಂದಿರ್ ಫಿರ್ ಸಕಾ೯ರ್, ಮಂದಿರ್ ವಹೀ ಬನಾಯೇಂಗೆ, ಮಂದಿರ್ ಜಲ್ದಿ ಬನಾಯೇಂಗೆ’ ಮುಂತಾದ ಘೋಷವಾಕ್ಯಗಳು ಅಯೋಧ್ಯೆಯಾದ್ಯಂತ ಮೊಳಗಲು ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.