ರಾಯ್ಪುರ: ಛತ್ತೀಸ್ಗಢದಲ್ಲಿ ಚುನಾವಣಾ ಪ್ರಚಾರ ನಡೆಸಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಅಲ್ಲೂ ಶ್ರೀರಾಮ ಮಂದಿರ ನಿರ್ಮಾಣದ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಶ್ರೀರಾಮನ ತವರೂರಾದ ಛತ್ತೀಸ್ಗಢದಲ್ಲಿ ರಾಮ ಮಂದಿರ ನಿರ್ಮಾಣವಾದರೆ ಆತನ ಜನ್ಮಸ್ಥಳ ಅಯೋಧ್ಯಾದಲ್ಲೂ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.
ರಾಮನ ತಾಯಿ ಕೌಸಲ್ಯೆಯ ತವರು ಛತ್ತೀಸ್ಗಢದ ರಾಯ್ಪುರ ಸಮೀಪದಲ್ಲಿರುವ ಕೌಶಲ ರಾಮಾಯಣದಲ್ಲಿ ಉಲ್ಲೇಖವಿದೆ. ಅಲ್ಲದೇ ವನವಾಸದ ಸಂದರ್ಭ ಇಲ್ಲಿನ ದಂತ್ಕರ್ಣಿ ಕಾಡಿನಲ್ಲಿ 14 ವರ್ಷ ವನವಾಸವಿದ್ದ. ಇಲ್ಲಿಂದಲೇ ಸೀತಾದೇವಿಯನ್ನು ಅಪಹರಣ ಮಾಡಲಾಯಿತು ಎನ್ನಲಾಗಿದೆ.
ಛತ್ತೀಸ್ಗಢ ರಾಮನ ತವರೂರು, ಇಂದು ಆತನ ಜನ್ಮಸ್ಥಳದ ವಿವಾದ ಸುಪ್ರೀಂಕೋರ್ಟ್ ಮುಂದಿದೆ. ತವರೂರಲ್ಲಿ ಶ್ರೀರಾಮನಿಗೆ ಮಂದಿರ ನಿರ್ಮಾಣವಾದರೆ, ಜನ್ಮಸ್ಥಳದಲ್ಲೂ ಮಂದಿರ ನಿರ್ಮಾಣವಾಗುತ್ತದೆ ಎಂದಿದ್ದಾರೆ.
source: ANII
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.