ನವದೆಹಲಿ: ಈ ಬಾರಿಯ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಸಿದ್ಧ ಯಾತ್ರ್ರಾ ಕ್ಷೇತ್ರ ಕೇದರಾನಾಥದಲ್ಲಿ ಆಚರಿಸಲಿದ್ದಾರೆ ಎನ್ನಲಾಗಿದೆ.
ಪ್ರಧಾನಿಯಾದ ಬಳಿಕ ಪ್ರತಿ ವರ್ಷ ಅವರು ಒಂದೊಂದು ಕಡೆ ತೆರಳಿ ವಿಶೇಷವಾಗಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ.
2014ರಲ್ಲಿ ಪ್ರಧಾನಿಯಾದ ಬಳಿಕದ ಮೊದಲ ದೀಪಾವಳಿಯನ್ನು ಅವರು ಸಿಯಾಚಿನ್ಗೆ ತೆರಳಿ ದೇಶದ ಹೆಮ್ಮೆಯ ಯೋಧರೊಂದಿಗೆ ಆಚರಿಸಿದ್ದರು.
2015ರಲ್ಲಿ ಅಮೃತಸರದ ಖಾಸಾದಲ್ಲಿನ ದೊಗ್ರಾಯ್ ವಾರ್ ಮೆಮೋರಿಯಲ್ ತೆರಳಿ ಸೇನಾ ಪಡೆಯೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.
2016ರಲ್ಲಿ ಹಿಮಾಚಲಪ್ರದೇಶಕ್ಕೆ ತೆರಳಿ ಐಟಿಪಿಬಿಯೊಂದಿಗೆ ದೀಪಾವಳಿ ಆಚರಿಸಿದ್ದರು.
2017ರಲ್ಲಿ ಬಿಎಸ್ಎಫ್ನೊಂದಿಗೆ ದೀಪಾವಳಿ ಆಚರಿಸಿದ್ದರು.
ಈ ಬಾರಿ ಕೇದಾರನಾಥದಲ್ಲಿ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 7ರಿಂದ ದೀಪಾವಳಿ ಸಂಭ್ರಮ ಆರಂಭಗೊಳ್ಳಲಿದೆ.
source: ANI