ತಿರುವನಂತಪುರಂ: ಕಲಿಯುವಿಕೆ ಒಂದು ನಿರಂತರ ಪ್ರಕ್ರಿಯೆ. ಅದಕ್ಕೆ ವಯಸ್ಸಿನ ಹಂಗಿಲ್ಲ. ಕೇರಳದ 96 ವರ್ಷದ ಮಹಿಳೆ ಕಾರ್ತಿಯಾಯಿನಿಯವರು, ಸಾಕ್ಷರತಾ ಪರೀಕ್ಷೆಯಲ್ಲಿ ಶೇ.98ರಷ್ಟು ಅಂಕಗಳನ್ನು ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಕೇರಳ ರಾಜ್ಯ ಸಾಕ್ಷರತಾ ಅಭಿಯಾನ ಮಂಡಳಿಯು ಅಕ್ಷರಲಕ್ಷಂ ಸಾಕ್ಷರತಾ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು, ಕಾರ್ತಿಯಾಯಿನಿ ಇದರಲ್ಲಿ ಭಾಗಿಯಾಗಿದ್ದರು. ಈ ಪರೀಕ್ಷೆಯಲ್ಲಿ ಶೇ.98ರಷ್ಟು ಅಂಕಗಳನ್ನು ಪಡೆಯುವ ಮೂಲಕ ಅವರು ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಓದುವಿಕೆ, ಬರವಣಿಗೆ, ಗಣಿತ ಇತ್ಯಾದಿಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಬರವಣಿಗೆಯಲ್ಲಿ 40ರಲ್ಲಿ 38 ಅಂಕ, ಓದುವಿಕೆ ಮತ್ತು ಗಣಿತದಲ್ಲಿ ಪೂರ್ಣ ಅಂಕಗಳನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ನಲ್ಲಿ ಪರೀಕ್ಷೆ ನಡೆದಿದ್ದು, ಬುಧವಾರ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದ ಬಳಿಕ ಕಾರ್ತಿಯಾಯಿನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಬಾಲ್ಯದಲ್ಲಿ ಶಿಕ್ಷಣ ಪಡೆಯಲಾಗದ ಇವರು, ಬಳಿಕ ತಮ್ಮ ಮಗಳ ಪ್ರೇರಣೆಯಿಂದ ಶಿಕ್ಷಣ ಪಡೆಯಲು ಮುಂದಾದರು. ವಿದ್ಯಾಭ್ಯಾಸ ಬಗ್ಗೆ ಅದಮ್ಯ ಆಸಕ್ತಿ ಹೊಂದಿದ ಇವರಿಗೆ ಇನ್ನೂ ಶಿಕ್ಷಣವನ್ನು ಮುಂದುವರೆಸಬೇಕೆಂಬ ಬಯಕೆಯಿದೆ.
source: THE HINDU
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.