ಮಂಗಳೂರು: ಮಂಗಳೂರಿನ ಬ್ಲೂಪಿಕ್ಸಲ್ ಅನಿಮೇಶನ್ ಸ್ಟುಡಿಯೋ ಪ್ರೈವೇಟ್ ಲಿ. ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರಾದ ಶ್ರೀ ವಿವೇಕ್ ಬೋಳಾರ್ರವರು ಫ್ರಾನ್ಸ್ ದೇಶದ ಅನ್ನೆಸಿಯಲ್ಲಿ ನಡೆಯುತ್ತಿರುವ ’ಅನ್ನೆಸಿ ಇಂಟರ್ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಫೆಸ್ಟಿವಲ್ ಅಂಡ್ ಮಾರ್ಕೇಟಿಂಗ್’(ಎಂ.ಐ.ಎಫ್.ಎ) ಸಮ್ಮೇಳನ ’ಅನ್ನೆಸ್ಸಿ 2015’ರಲ್ಲಿ ಭಾಗವಹಿಸಲಿದ್ದಾರೆ.
ಜೂನ್ 15 ರಿಂದ 20 ರವರೆಗೆ ’ಅಸೋಶಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ’ (ಅಬಯ್) ನಿಯೋಗದ ಪ್ರತಿನಿಧಿಯಾಗಿ ಅನಿಮೇಶನ್ ನೀತಿ ಕುರಿತು ಸರಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಅನಿಮೇಶನ್ ಉದ್ಯಮದ ನಡುವೆ ನೋಡಲ್ ಕನೆಕ್ಟರ್ ಆಗಿರುವ ಅಬಯ್ ಸಂಘಟನೆಯು ಕರ್ನಾಟಕ ರಾಜ್ಯದ ಅನಿಮೇಶನ್, ವಿಜುವಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮಿಕ್ಸ್ (AVGC) ನೀತಿ ಕುರಿತು ಸರಕಾರಕ್ಕೆ ವರದಿ ನೀಡುವ ಹಾಗೂ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.
ವಿವೇಕ್ ಬೋಳಾರ್ರವರ ತಂಡ ತಯಾರಿಸಿದ ’ಅಂಡೆ ಪಿರ್ಕಿ’ ಅನಿಮೇಟೆಡ್ ಚಿತ್ರವು ಕಳೆದ ಮಾರ್ಚ್ನಲ್ಲಿ ಫೆಡರೇಶನ್ ಅಫ್ ಇಂಡಿಯನ್ ಚೇಂಬರ್ಸ್ ಅಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮುಂಬೈಯಲ್ಲಿ ಆಯೋಜಿಸಿದ್ದ ’ಫಿಕ್ಕಿ ಪ್ರೇಮ್ಸ್ 2015’ ಉತ್ಸವದಲ್ಲಿ ಬೆಸ್ಟ್ ಅನಿಮೇಟೆಡ್ ಟಿ.ವಿ. ಎಪಿಸೋಡ್ ವಿಭಾಗದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಇವರು ಬಿ.ಎಸ್.ಎನ್.ಎಲ್.ನ ನಿವೃತ್ತ ಉದ್ಯೋಗಿ ಶ್ರೀಮತಿ ಪದ್ಮಾವತಿ ಎಂ. ಪುತ್ರನ್ರವರ ಸುಪುತ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.