ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ 2019ರ ಜನವರಿಗೆ ಮುಂದೂಡಿದೆ. ಇದು ಹಿಂದೂ ಸಂಘಟನೆಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆಯನ್ನು ತರಬೇಕು ಎಂದು ಒತ್ತಾಯಪಡಿಸಲಾಗುತ್ತಿದೆ.
ವಿಶ್ವಹಿಂದೂ ಪರಿಷದ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳಿಕ ಶಿವಸೇನೆ ಕೂಡ ಸುಗ್ರೀವಾಜ್ಞೆ ತರಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದೆ.
‘ಅಯೋಧ್ಯಾ ವಿಷಯದಲ್ಲಿ ಕೋರ್ಟ್ನಿಂದ ಆಗಬೇಕಾದುದು ಏನು ಇಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ರಾಮಮಂದಿರ ಕರಾಚಿ ಅಥವಾ ಪಾಕಿಸ್ತಾನದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ. ಅಯೋಧ್ಯಾದಲ್ಲಿ ಮಾತ್ರ ಸಾಧ್ಯ. ಶಿವಸೇನೆ ಕೂಡ ಅಯೋಧ್ಯಾದಲ್ಲಿ ಮಂದಿರ ನಿರ್ಮಾಣ ಬಯಸುತ್ತದೆ. ಶೀಘ್ರವೇ ಕೇಂದ್ರ ಈ ಬಗ್ಗೆ ಸುಗ್ರೀವಾಜ್ಞೆ ತರಬೇಕು’ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
ಆರ್ಎಸ್ಎಸ್ ಮುಖಂಡ ಅರುಣ್ ಕುಮಾರ್ ಅವರೂ ಇಂತಹುದೇ ಬೆಡಿಕೆಯನ್ನಿಟ್ಟಿದ್ದು, ’ರಾಮ ಮಂದಿರ ವಿಷಯದಲ್ಲಿ ಕೋರ್ಟ್ ವಿಳಂಬ ಮಾಡುತ್ತಿದ್ದರೆ, ಸರ್ಕಾರ ಸುಗ್ರೀವಾಜ್ಞೆಯನ್ನು ತರಬೇಕು. ಸಾಧುಗಳ ನಿರ್ಧಾರದೊಂದಿಗೆ ಆರ್ಎಸ್ಎಸ್ ಇರುತ್ತದೆ’ ಎಂದಿದ್ದಾರೆ.
source: Republictv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.