ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭಾನುವಾರ ’ಸ್ಟೇಟಸ್ ಸರ್ಟಿಫಿಕೇಟ್’ ಅಥವಾ ಐಸಿಯತ್ ಪ್ರಮಾಣ್ ಪತ್ರವನ್ನು ಪಡೆಯುವ ಆನ್ಲೈನ್ ಪ್ರಕ್ರಿಯೆಗೆ ಚಾಲನೆಯನ್ನು ನೀಡಿದರು.
ಇದೇ ವೇಳೆ ನೂತನ ತೆಹ್ಸೀಲ್ ಭವನಕ್ಕೂ ಅವರು ಚಾಲನೆಯನ್ನು ನೀಡಿದರು.
ಸ್ಟೇಟಸ್ ಸರ್ಟಿಫಿಕೇಟ್ ಪಡೆಯುವ ಆನ್ಲೈನ್ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ ಜನರು ಸರ್ಕಾರದೊಂದಿಗೆ ಉತ್ತಮ ರೀತಿಯಲ್ಲಿ ಕನೆಕ್ಟ್ ಆಗಲಿದ್ದಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರಕ್ಕೆ ಸಹಾಯವಾಗುತ್ತದೆ ಎಂದು ಯೋಗಿ ಹೇಳಿದ್ದಾರೆ.
ಸರ್ಕಾರಿ ಕಟ್ಟಡಗಳೂ ಎಲ್ಲಾ ವ್ಯವಸ್ಥೆಯನ್ನು ರಚನಾತ್ಮಕವಾಗಿಡಲು ಸಹಕಾರಿಯಾಗಿದ ಎಂದಿದ್ದಾರೆ.
ಆನ್ಲೈನ್ ಮೂಲಕ ಸ್ಟೇಟಸ್ ಸರ್ಟಿಫಿಕೇಟ್ಗೆ ಅರ್ಜಿ ಹಾಕಿದರೆ, 20 ದಿನದೊಳಗೆ ಪ್ರಮಾಣ ಪತ್ರ ಕೈಸೇರಲಿದೆ, ಇನ್ನು ಮುಂಬರುವ ದಿನಗಳಲ್ಲಿ ಈ ಸಮಯ ಇನ್ನೂ ತಗ್ಗಲಿದೆ ಎಂದಿದ್ದಾರೆ.
ಅಲ್ಲದೇ ಅರ್ಜಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು 3 ದಿನದೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
source: www.business-standard.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.