ವಿಶ್ವಸಂಸ್ಥೆ: ವಿಶ್ವಸಂಸ್ಥೆ ಶಾಂತಿಪಾಲಕ ಕಮಾಂಡರ್ಗಳ(ಪೀಸ್ಕೀಪರ್ ಕಮಾಂಡೋಗಳ) ತರಬೇತಿಗಾಗಿ ಭಾರತ 300,000 ಡಾಲರ್ಗಳ ಕೊಡುಗೆಯನ್ನು ವಿಶ್ವಸಂಸ್ಥೆಗೆ ನೀಡಿದೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟ್ರೇಸ್ ಅವರ ವಕ್ತಾರ ಸ್ಟೀಫನ್ ಡುಜರಿಕ್ ಅವರು, ಭಾರತ ಕಮಾಂಡರ್ಗಳ ತರಬೇತಿಗಾಗಿ 300,000 ಡಾಲರ್ ನೆರವನ್ನು ನೀಡಿದೆ ಎಂಬುದಾಗಿ ತಿಳಿಸಿದ್ದಾರೆ.
ವಿಶ್ವಸಂಸ್ಥೆ ಶಾಂತಿಪಾಲನೆಯ ಭವಿಷ್ಯದ ಕಮಾಂಡರ್ಗಳ, ಮ್ಯಾನೇಜರ್ಗಳ ಸಾಮರ್ಥ್ಯವನ್ನು ವೃದ್ಧಿಸುವ ಸಲುವಾಗಿ, ಯುಎನ್ ಮಾನದಂಡಗಳ ಬಗೆಗೆ ಅರಿವು ಮೂಡಿಸುವ ಸಲುವಾಗಿ ಮೂರು ವರ್ಷಗಳ ಅವಧಿಗೆ ‘ಪೈಪ್ಲೈನ್ ಟು ಪೀಸ್ಕೀಪಿಂಗ್ ಕಮಾಂಡ್ ಪ್ರೋಗ್ರಾಂ’ನ್ನು ಆಯೋಜನೆಗೊಳಿಸಲಾಗುತ್ತದೆ.
ಭಾರತ ನೀಡಿರುವ ಕೊಡುಗೆಯನ್ನು ಶಿಸ್ತು ಮತ್ತು ನಡವಳಿಕೆಯ ವಿಷಯದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಸ್ಟೀಫನ್ ಹೇಳಿದ್ದಾರೆ.
source: zeenews
Thank you #India for the donation of US$300,000 for the “Pipeline to Peacekeeping Command Programme” which will strengthen future commanders & managers’ capacity to deal with conduct & discipline issues incl. sexual exploitation & abuse #HonouringOurValues https://t.co/UwTBreqO8w pic.twitter.com/NnDK4Jp3Cl
— UN Peacekeeping (@UNPeacekeeping) October 26, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.