ಲಕ್ನೋ: ಗೂಗಲ್ ಟ್ರೆಂಡ್ ಪ್ರಕಾರ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇಶದ ಇತರ ಎಲ್ಲಾ ಸಿಎಂಗಳನ್ನು ಹಿಂದಿಕ್ಕಿ ಅತೀಹೆಚ್ಚು ಗೂಗಲ್ ಸರ್ಚ್ಗೊಳಗಾದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈಶಾನ್ಯ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಸರ್ಚ್ಗಳು ಸೇರಿದಂತೆ ಶೇ.70ರಷ್ಟು ಸರ್ಚ್ಗಳು ಯೋಗಿ ಅವರನ್ನೇ ಗುರಿಯಾಗಿಸಿಕೊಂಡದ್ದಾಗಿವೆ. ಯುಪಿಯ ಇತರ ಇಬ್ಬರು ಪ್ರಮುಖ ಮುಖಂಡರಾದ ಮಾಯಾವತಿ ಹಾಗೂ ಅಖಿಲೇಶ್ ಸಿಂಗ್ ಯಾದವ್ ಈ ಟ್ರೆಂಡ್ನಲ್ಲಿ ಯೋಗಿಗಿಂತ ತುಂಬಾನೇ ಹಿಂದಿದ್ದಾರೆ.
ಬಿಜೆಪಿ ಸಿಎಂಗಳಾದ ಶಿವರಾಜ್ ಸಿಂಗ್ ಚೌವ್ಹಾಣ್, ಗುಜರಾತ್ ಸಿಎಂ ವಿಜಯ್ ರೂಪಾಣಿ, ರಾಜಸಾಥನ ಸಿಎಂ ವಸುಂಧರಾ ರಾಜೆ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರುಗಳೂ ಯೋಗಿಗಿಂತ ಗೂಗಲ್ ಸರ್ಚ್ನಲ್ಲಿ ಹಿಂದಿದಿದ್ದಾರೆ.
ಗೂಗಲ್ ಟ್ರೆಂಡ್ ಯೋಗಿ ಎಷ್ಟು ಜನಪ್ರಿಯರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯೂ ಆಗಿದೆ. ಉತ್ತರಪ್ರದೇಶ ಮಾತ್ರವಲ್ಲದೇ ಇತರ ರಾಜ್ಯಗಳಿಗೂ ಅವರ ಜನಪ್ರಿಯತೆ ಪಸರಿಸಿದ್ದು, ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ಸ್ಟಾರ್ ಪ್ರಚಾರಕರಾಗುತ್ತಿದ್ದಾರೆ.
source: www.newindianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.