ಲಕ್ನೋ: ಪತ್ರಕರ್ತನೊಬ್ಬನನ್ನು ಜೀವಂತವಾಗಿ ದಹಿಸಿದ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಬ್ಬ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ.
ಫಿಲಿಬಿಟ್ ಕ್ಷೇತ್ರದಲ್ಲಿ ಪತ್ರಕರ್ತ ಹೈದರ್ ಖಾನ್ ಎಂಬುವವರ ಮೇಲೆ ಹಲ್ಲೆ ನಡೆಸಿ, ಅವರನ್ನು ಬೈಕಿಗೆ ಕಟ್ಟಿ ದುಷ್ಕರ್ಮಿಗಳು ಎಳೆದಾಡಿದ ಘಟನೆ ಭಾನುವಾರ ನಡೆದಿದೆ. ಮರಳು ಮಾಫಿಯಾದ ವಿರುದ್ಧ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚಿಗಷ್ಟೇ ಯುಪಿ ಸಚಿವ ರಾಮ್ ಮೂರ್ತಿ ವರ್ಮಾ ಎಂಬುವವರ ವಿರುದ್ಧ ವರದಿ ಪ್ರಕಟಿಸಿದ ಪತ್ರಕರ್ತನೊಬ್ಬನನ್ನು ಸಜೀವವಾಗಿ ದಹಿಸಿ ಹತ್ಯೆ ಮಾಡಲಾಗಿತ್ತು. ಇದನ್ನು ಸಮರ್ಥಿಸಿಕೊಂಡಿರುವ ಅಲ್ಲಿನ ಮತ್ತೊಬ್ಬ ಸಚಿವ ಪ್ರಶಾಂತ್ ಯಾದವ್, ಕೆಲವೊಂದು ಘಟನೆಗಳು ಸ್ವಾಭಾವಿಕವಾಗಿ ಮತ್ತು ಹಣೆ ಬರಹದಿಂದಾಗಿ ಆಗುತ್ತದೆ. ಪ್ರಕೃತಿಯೊಂದಿಗೆ ನೀವು ಗುದ್ದಾಡಲು ಸಾಧ್ಯವಿಲ್ಲ’ ಎಂದಿದ್ದಾನೆ.
ಉತ್ತರಪ್ರದೇಶದಲ್ಲಿ ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆಯಾಗುತ್ತಿರುವುದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಸಚಿವರುಗಳು ಕೂಡ ಗೂಂಡಾಗಳಂತೆ ವರ್ತಿಸುತ್ತಿರುವುದು ಅಲ್ಲಿನ ಶಾಂತಿ ಸುವ್ಯವಸ್ಥೆ ಹದಗೆಡಲು ಮತ್ತಷ್ಟು ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.