ಸಿಬಿಎಸ್ಇಗೆ ಒಳಪಡಲು ಬಯಸುವ ನೂತನ ಶಾಲೆಗಳಿಗೆ ಪ್ರಕ್ರಿಯೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ನವದೆಹಲಿ: ನೂತನ ಶಾಲೆಗಳು ಸಿಬಿಎಸ್ಇಗೊಳಪಡುವ ಪ್ರಕ್ರಿಯೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪರಿಷ್ಕರಣೆಗೊಳಿಸಿದೆ.
ಗುರುವಾರ ದೆಹಲಿಯ ಶಾಸ್ತ್ರೀ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಕಾಶ್ ಜಾವ್ಡೇಕರ್ ಈ ಘೋಷಣೆ ಮಾಡಿದ್ದಾರೆ.
‘ಶಾಲೆಗಳಿಗೆ ಅಫಿಲಿಯೇಶನ್ ನೀಡುವ ಪ್ರಕ್ರಿಯೆಯಲ್ಲಿ ಸಿಬಿಎಸ್ಇ ಹಲವಾರು ಬದಲಾವಣೆಗಳನ್ನು ತಂದಿದೆ. ಕೇಂದ್ರ ಮಟ್ಟ ಮತ್ತು ರಾಜ್ಯ ಮಟ್ಟಗಳಲ್ಲಿ ಎನ್ಒಸಿಗಳ ಅನಗತ್ಯ ನಕಲನ್ನು ತಡೆಗಟ್ಟಿದ್ದೇವೆ’ ಎಂದಿದ್ದಾರೆ.
ಪ್ರಸ್ತುತ ದೇಶದಲ್ಲಿ 20,700 ಶಾಲೆಗಳು ಸಿಬಿಎಸ್ಇಗೊಳಪಟ್ಟಿದ್ದು, ಪ್ರತಿವರ್ಷ ನೂತನ ಶಾಲೆಗಳನ್ನು ತೆರೆಯಲು 2000ದಿಂದ 2500 ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದಿದ್ದಾರೆ.
ಪ್ರಸ್ತುತ ಎನ್ಓಸಿ ಪರಿಶೀಲನೆಯನ್ನು ರಾಜ್ಯಮಟ್ಟದಲ್ಲಿ ನಡೆಸಲಾಗುತ್ತದೆ, ಬಳಿಕ ಸಿಬಿಎಸ್ಎಸ್ಇ ಎನ್ಒಸಿ ಪರಿಶೀಲನೆ ನಡೆಸುತ್ತದೆ.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.