ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ಆರ್ಎಸ್ಎಸ್ನ ವಾರ್ಷಿಕ ‘ವಿಜಯ ದಶಮಿ’ ಸಮಾರಂಭ ಜರುಗಿದ್ದು, ನೋಬೆಲ್ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ ಇದರಲ್ಲಿ ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ’ರಾಜಕೀಯದ ಮಧ್ಯಪ್ರವೇಶ ಇಲ್ಲದೇ ಇರುತ್ತಿದ್ದರೆ ಅಯೋಧ್ಯಾದಲ್ಲಿ ರಾಮ ಮಂದಿರ ಎಂದೋ ನಿರ್ಮಾಣವಾಗುತ್ತಿತ್ತು, ಸರ್ಕಾರ ಕಾನೂನು ತಂದು ನಮಗೆ ಮಂದಿರ ನಿರ್ಮಿಸಲು ಅನುವು ಮಾಡಿಕೊಡಬೇಕು’ ಎಂದರು.
ಕೆಲವೊಂದು ಮೂಲಭೂತವಾದಿ ಮನಸ್ಥಿತಿಗಳು ದೇಶದ ಹಿತಾಸಕ್ತಿಯನ್ನು ಪುಡಿಗಟ್ಟುತ್ತಿವೆ ಮತ್ತು ಸ್ವಯಂ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿವೆ. ಇದರಿಂದ ರಾಮಮಂದಿರ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ ಎಂದಿದ್ದಾರೆ.
ಸ್ವಾಭಿಮಾನದ ದೃಷಿಕೋನದಿಂದ ರಾಮಮಂದಿರ ನಿರ್ಮಾಣ ಅತ್ಯಗತ್ಯವಾಗಿದ್ದು, ದೇಶದಲ್ಲಿ ಏಕತೆ ಮತ್ತು ಸದಾಶಯ ಮೂಡಿಸಲೂ ಇದು ಸಹಕಾರಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಾಕಿಸ್ಥಾನದ ಧೋರಣೆಯನ್ನು ಬಲವಾಗಿ ಖಂಡಿಸಿದ ಅವರು, ಅಲ್ಲಿನ ಸರ್ಕಾರ ಬದಲಾದರೂ ನೀತಿಗಳಲ್ಲಿ ಬದಲಾವಣೆಯಾಗಿಲ್ಲ ಎಂದರು.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.