ಚೀನಾ, ಪಾಕಿಸ್ಥಾನದೊಂದಿಗಿನ ಗಡಿಯಲ್ಲಿ ಗುಪ್ತಚರವನ್ನು ಬಲಿಷ್ಠಗೊಳಿಸುವ ಸಲುವಾಗಿ ಸಶಸ್ತ್ರ ಸೀಮಾ ಬಲದ ಸುಮಾರು 2104 ಸಿಬ್ಬಂದಿಗಳನ್ನು ಗುಪ್ತಚರ ಇಲಾಖೆಗೆ ವರ್ಗಾಯಿಸಲು ಕೇಂದ್ರ ಗೃಹಸಚಿವಾಲಯ ನಿರ್ಧರಿಸಿದೆ.
ನವದೆಹಲಿ: ಗಡಿ ಕಾವಲು ಪಡೆಯಾದ ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ)ದ ಸುಮಾರು 2104 ಸಿಬ್ಬಂದಿಗಳನ್ನು ಗುಪ್ತಚರ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಚೀನಾ ಮತ್ತು ನೇಪಾಳ ಗಡಿಯಲ್ಲಿ ಗುಪ್ತಚರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಶಸ್ತ್ರ ಸೀಮಾ ಬಲದ 24 ಕೇಡರ್ಗಳ ಪೈಕಿ 19 ಕೇಡರ್ಗಳನ್ನು ಗುಪ್ತಚರ ಇಲಾಖೆಗೆ ಕಳುಹಿಸಿಕೊಡುವಂತೆ ಅಕ್ಟೋಬರ್ 12ರಂದು ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ.
ಒಟ್ಟು 2,104 ಸಿಬ್ಬಂದಿಗಳನ್ನು ಗುಪ್ತಚರಕ್ಕೆ ಕಳುಹಿಸಲಾಗುತ್ತಿದೆ. ಯುದ್ಧದಲ್ಲಿ ಭಾಗಿಯಾಗದ ಕೇಡರ್ ಇದಾಗಿದ್ದು, ಡೈಯಿಂಗ್ ಕೇಡರ್ ಎಂದೇ ಇದನ್ನು ಕರೆಯಲಾಗುತ್ತದೆ. ಹೀಗಾಗಿ ಇವರನ್ನು ಗುಪ್ತಚರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ.
ಗಡಿಯಲ್ಲಿ ಗುಪ್ತಚರವನ್ನು ಬಲಿಷ್ಠಗೊಳಿಸುವ ಸಲುವಾಗಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 2016ರ ಜೂನ್ನಲ್ಲಿ ಗೃಹ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.
ಇದೀಗ ಸಚಿವಾಲಯವು ಸಶಸ್ತ್ರ ಸೀಮಾ ಬಲದ 19 ಕೇಡರ್ನ್ನು ಗುಪ್ತಚರಕ್ಕೆ ವರ್ಗಾಯಿಸುತ್ತಿದೆ.
source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.