ವಿಶ್ವಸಂಸ್ಥೆ: ವಿಜಯ ಲಕ್ಷ್ಮೀ ಪಂಡಿತ್ ಅವರ ಭಾವಚಿತ್ರವನ್ನು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅಧ್ಯಕ್ಷರ ಕಛೇರಿಯಲ್ಲಿ ಹಾಕಲಾಗುವುದು ಎಂದು ಜನರಲ್ ಅಸೆಂಬ್ಲಿ ಅಧ್ಯಕ್ಷೆ ಮರಿಯಾ ಫೆರ್ನಾಂಡ ಎಸ್ಪಿನೋಸ ಹೇಳಿದ್ದಾರೆ.
1953ರಲ್ಲಿ ವಿಜಯ ಲಕ್ಷ್ಮೀ ಪಂಡಿತ್ ಅವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಈ ಹುದ್ದೆಯನ್ನೇರಿದ ಮೊದಲ ಮಹಿಳೆಯೂ ಅವರಾಗಿದ್ದಾರೆ.
ತಾನು ಪಂಡಿತ್ ಅವರಿಂದ ಸಾಕಷ್ಟು ಪ್ರೇರಣೆಯನ್ನು ಪಡೆದುಕೊಂಡಿದ್ದು, ಅವರ ಭಾವಚಿತ್ರವನ್ನು ಕಛೇರಿಯಲ್ಲಿ ಹಾಕಲು ಬಯಸಿದ್ದೇನೆ ಎಂದು ಮರಿಯಾ ಹೇಳಿಕೊಂಡಿದ್ದಾರೆ.
ಮರಿಯಾ ಅವರು ಜನರಲ್ ಅಸೆಂಬ್ಲಿ ಅಧ್ಯಕ್ಷ ಹುದ್ದೆಯನ್ನೇರಿದ 4ನೇ ಮಹಿಳೆಯಾಗಿದ್ದಾರೆ, 69 ಪುರುಷರು ಈ ಹುದ್ದೆಯನ್ನು ಇದುವರೆಗೆ ಅಲಂಕರಿಸಿದ್ದಾರೆ.
ಸಿಕ್ಕಿಂ ಡೆಮಾಕ್ರಾಟಿಕ್ ಪಕ್ಷದ ಪ್ರೇಮ್ ದಾಸ್ ಅವರು ಇತರ ಸಂಸದರೊಂದಿಗೆ ಮರಿಯಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ವಿಜಯಲಕ್ಷ್ಮೀ ಪಂಡಿತ್ ಅವರ ಭಾವಚಿತ್ರ ಹಾಕುವ ಯೋಜನೆಯನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.