ಪುಣೆ: ದೇಶದಲ್ಲೇ ಮೊದಲ ಬಾರಿಗೆ ಪುಣೆಯ ವೈದ್ಯರುಗಳು ತಲೆಬುರುಡೆ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ 4 ವರ್ಷದ ಬಾಲಕಿಯ ಜೀವವನ್ನು ರಕ್ಷಿಸಿದ್ದಾರೆ. ಈಕೆಯ ತಲೆಬುರುಡೆ ಅಪಘಾತದಿಂದಾಗಿ ಶೇ.60ರಷ್ಟು ಹಾನಿಗೊಳಗಾಗಿತ್ತು.
ವರದಿಗಳ ಪ್ರಕಾರ, ವೈದ್ಯರುಗಳು ಬಾಲಕಿಯ ಐದನೇ ಮೂರರಷ್ಟು ಹಾನಿಗೊಳಗಾದ ತಲೆಬುರಡೆಯನ್ನು, ಯುಎಸ್ ಕಂಪನಿ ತಯಾರಿಸಿದ್ದ ಕಸ್ಟಮೈಸ್ಡ್ ಮೂರು ಆಯಾಮಗಳ ವ್ಯಕ್ತಿಗತ ಪಾಲಿಥಿಲಿನ್/ಪಾಲಿಥಿನ್(ಪಿಇ) ಎಲುಬಿನ ಮೂಲಕ ಯಶಸ್ವಿಯಾಗಿ ರಿಪ್ಲೇಸ್ ಮಾಡಿದ್ದಾರೆ.
ಕಳೆದ ವರ್ಷದ ಮೇನಲ್ಲಿ ಬಾಲಕಿ ಅಪಘಾತಕ್ಕೆ ಒಳಗಾಗಿದ್ದಳು. ಒಂದು ವರ್ಷದ ಬಳಿಕ ಆಕೆಯನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಮತ್ತೆ ದಾಖಲು ಮಾಡಲಾಗಿತ್ತು. ತಲೆಬುರುಡೆ ಮರುಜೋಡಿಸುವ 2 ಅತೀ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಎರಡು ತಿಂಗಳ ಬಳಿಕ ಆಕೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ. ಆರೋಗ್ಯವಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ನ್ಯೂರೋ ಸರ್ಜನ್ ವಿಶಾಲ್ ರೋಕಡೆ, ಡಾ.ಜಿತೇಂದ್ರ ಓಸ್ವಾಲ್ ಸೇರಿದಂತೆ ಅನೇಕ ವೈದ್ಯರು ಆಕೆಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
source; timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.