ನವದೆಹಲಿ: ಬೋಯಿಂಗ್ ಸಂಸ್ಥೆಯ ಭಾರತ ಕಾರ್ಯಾಚರಣೆಗಳ ಮುಖ್ಯಸ್ಥ ಪ್ರತ್ಯುಷ್ ಕುಮಾರ್ ಅವರು, ಯುಎಸ್ನಲ್ಲಿನ ಎಫ್-15 ಫೈಟರ್ ಏರ್ಕ್ರಾಫ್ಟ್ ಪ್ರೋಗ್ರಾಂಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
‘ಪ್ರತ್ಯುಷ್ ಕುಮಾರ್ ಅವರು ನಮ್ಮ ಎಫ್-15 ಫೈಟರ್ ಏರ್ಕ್ರಾಫ್ಟ್ ಪ್ರೋಗ್ರಾಂ ಮತ್ತು ಯುಎಸ್ ಹಾಗೂ ಜಾಗತಿಕವಾಗಿ ಇತರ ವ್ಯವಹಾರಗಳ ಮುಂದಾಳುವಾಗಿ ನೇಮಕವಾಗಿದ್ದಾರೆ’ ಎಂದು ಬೋಯಿಂಗ್ ಬೆಂಗಳೂರಿನಲ್ಲಿ ಪ್ರಕಟನೆ ಮೂಲಕ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರ್, ‘ಎಫ್-15 ಪ್ರೋಗ್ರಾಂನ ನೂತನ ಯುಎಸ್ ಜವಾಬ್ದಾರಿಯ ಬಗ್ಗೆ ಉತ್ಸುಹುಕನಾಗಿದ್ದೇನೆ. ಕಂಪನಿ ತನ್ನ ಸ್ಥಳಿಯ ಉತ್ಪಾದನೆ, ತಂತ್ರಜ್ಞಾನ, ಸಂಶೋಧನೆ, ಉತ್ಪನ್ನವನ್ನು ವಿಸ್ತರಣೆ ಮಾಡಲಿದೆ’ ಎಂದಿದ್ದಾರೆ.
ಭಾರತದಲ್ಲಿನ ಕುಮಾರ್ ಅವರ ಉತ್ತರಾಧಿಕಾರಿಯನ್ನು ಶೀಘ್ರದಲ್ಲೇ ಬೋಯಿಂಗ್ ಘೋಷಣೆ ಮಾಡಲಿದೆ.
ಐದು ವರ್ಷಗಳ ಅವಧಿಯಲ್ಲಿ ಕುಮಾರ್ ಅವರು, ಬೋಯಿಂಗ್ನ ವಾಣಿಜ್ಯ ಏರೋಪ್ಲೇನ್, ಡಿಫೆನ್ಸ್ ಸ್ಪೇಸ್, ಸೆಕ್ಯೂರಿಟಿ, ಜಾಗತಿಕ ಸೇವೆಗಳನ್ನು ಸುಧಾರಣೆಗೊಳಿಸಿದ್ದಾರೆ.
Source; Hndustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.