ನವದೆಹಲಿ: ಜರ್ಖಾತದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ಸಂದೀಪ್ ಚೌಧರಿ ಅವರು, ಸೋಮವಾರ ದೇಶಕ್ಕೆ ಮೊತ್ತ ಮೊದಲ ಬಂಗಾರದ ಪದಕವನ್ನು ತಂದಿತ್ತಿದ್ದಾರೆ.
ಪುರುಷರ ಎಫ್42-44/61-64 ಕೆಟಗರಿಯಲ್ಲಿ ಸಂದೀಪ್ ಅವರು, 60.01 ಮೀಟರ್ ಎಸೆದು ಬಂಗಾರದ ಗೌರವವನ್ನು ಪಡೆದುಕೊಂಡರು.
ಶ್ರೀಲಂಕಾದ ಚಮಿಂಡಾ ಸಂಪತ್ ಹೆಟ್ಟಿ ಬಂಗಾರದ ಪದಕ, ಇರಾನ್ನ ಒಮಿದಿ ಅಲಿಯವರು ಕಂಚಿನ ಪದಕವನ್ನು ಗೆದ್ದಿದ್ದಾರೆ.
ಭಾನುವಾರ ಭಾರತ ಈ ಗೇಮ್ಸ್ನಲ್ಲಿ 2 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಜಯಿಸಿದೆ.
ಪವರ್ಲಿಫ್ಟಿಂಗ್ನಲ್ಲಿ ಫರ್ಮನ್ ಬಾಷಾ ಮತ್ತು ಪರಮಜೀತ್ ಕುಮಾರ್ ಬೆಳ್ಳಿ ಗೆದ್ದಿದ್ದರು.
source; Hindutantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.