ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಇತ್ತೀಚಿನ ದಿನಗಳಲ್ಲಿ ಇರಾಕ್, ಸಿರಿಯಾದ ಭಯಾನಕ ಉಗ್ರ ಸಂಘಟನೆ ಇಸಿಸ್ನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕಗಳು ಮೂಡುತ್ತಿವೆ. ಅಲ್ಲಿ ಪದೇ ಪದೇ ಹಾರುತ್ತಿರುವ ಇಸಿಸ್ ಧ್ವಜ ಈ ಆತಂಕಕ್ಕೆ ಮೂಲ ಕಾರಣ.
ಪ್ರತ್ಯೇಕತಾವಾದಿಗಳ ಭಾರತ ವಿರೋಧಿ ಪ್ರತಿಭಟನೆ, ಸಮಾವೇಶಗಳಲ್ಲಿ ಪಾಕಿಸ್ಥಾನದ ಧ್ವಜ ಹಾರುತ್ತಿರುವುದು ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಇಸಿಸ್ ಧ್ವಜಗಳೂ ಹಾರುತ್ತಿವೆ. ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಬಳಿಕ ಶ್ರೀನಗರ ನೌಹಾತ್ ಪ್ರದೇಶದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮುಸುಕು ಧರಿಸಿ ಇಸಿಸ್ ಧ್ವಜವನ್ನು ಹಾರಿಸುತ್ತಾ ಮಸಿದಿ ಹೊರಗಿಂದ ಬಂದಿದ್ದಾರೆ. ಅಲ್ಲದೇ ಪಾಕ್ ಪರ ಘೋಷಣೆಗಳನ್ನೂ ಕೂಗಿದ್ದಾರೆ. ಇಂತಹ ಘಟನೆಗಳು ಇದಕ್ಕೂ ಮೊದಲು ಹಲವಾರು ಬಾರಿ ನಡೆದಿವೆ.
ಈ ಘಟನೆಗಳು ಪ್ರತ್ಯೇಕತಾವಾದಿ ಜಿಹಾದಿ ಯುವಕರು ಇಸಿಸ್ನತ್ತ ಹೆಚ್ಚು ಆಕರ್ಷಿತರಾಗುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಅಥವಾ ಇಸಿಸ್ ಬೆಂಬಲ ನಮಗಿದೆ ಎಂಬ ಸಂದೇಶವನ್ನು ಭಾರತಕ್ಕೆ ನೀಡಲು ಈ ರೀತಿ ಮಾಡುತ್ತಿರಬಹುದು. ಈ ಬಗ್ಗೆ ಕೇಂದ್ರ ಮತ್ತು ಅಲ್ಲಿನ ಸರ್ಕಾರಗಳು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಅಲ್ಲದೇ ಇಸಿಸ್, ಪಾಕ್ ಧ್ವಜ ಹಾರಿಸುವವರನ್ನು ಬಂಧಿಸಿ, ಅವರಿಗೆ ಇಸಿಸ್ ಜತೆ ನಂಟಿದೆಯೇ ಎಂಬುದನ್ನು ಅರಿತುಗೊಳ್ಳುವುದು ಅತ್ಯವಶ್ಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.