ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತೀಯ ಕುಲಭೂಷಣ್ ಯಾದವ್ ಅವರ ಬಗೆಗಿನ ಅಂತಿಮ ಸಾರ್ವಜನಿಕ ವಿಚಾರಣೆಯನ್ನು ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಮುಂದಿನ ವರ್ಷದ ಫೆಬ್ರವರಿ 18-21ರವರೆಗೆ ನಡೆಸಲಿದೆ.
ಹೇಗ್ನಲ್ಲಿರುವ ವಿಶ್ವಸಂಸ್ಥೆಯ ನ್ಯಾಯಾಂಗದಲ್ಲಿ ವಿಚಾರಣೆ ಜರುಗಲಿದೆ. ಭಾರತೀಯ ನೌಕಾ ಪಡೆಯ ಅಧಿಕಾರಿಯಾಗಿರುವ ಜಾಧವ್ ಅವರ ಗಲ್ಲುಶಿಕ್ಷೆಗೆ ತಡೆ ನೀಡಿದ ಒಂದು ವರ್ಷಗಳ ತರುವಾಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದೆ.
ಮೊದಲ ಹಂತದ ವಾಗ್ ಸಂವಾದಗಳು ಫೆ.18ರಂದು ಜರುಗಲಿದೆ, ಈ ದಿನ ಭಾರತ ಬೆಳಿಗ್ಗೆ 10ರಿಂದ ಮಧ್ಯಾಹ್ಮ 1 ಗಂಟೆಯವರೆಗೆ ವಾದಿಸಲಿದೆ. ಪಾಕಿಸ್ಥಾನ ತನ್ನ ಮೊದಲ ಹಂತದ ವಾದವನ್ನು ಫೆ.19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಸಲಿದೆ.
47 ವರ್ಷದ ಜಾಧವ್ ಅವರನ್ನು 2017ರ ಎಪ್ರಿಲ್ನಲ್ಲಿ ಪಾಕಿಸ್ಥಾನ ಮಿಲಿಟರಿ ಬೇಹುಗಾರಿಕೆಯ ಆರೋಪ ಹೊರಿಸಿ ಜೈಲಿನಲ್ಲಿಟ್ಟಿದೆ, ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಇಲ್ಲಿ ಅವರ ಗಲ್ಲುಶಿಕ್ಷೆಗೆ ತಡೆ ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.